ತೆಲಂಗಾಣ ಪೊಲೀಸ್‌ ಇಲಾಖೆಯಲ್ಲಿ ಮೇಜರ್‌ ಸರ್ಜರಿ: ನಿನ್ನೆ ಐಪಿಎಸ್‌, ಇಂದು ಡಿಎಸ್‌ಪಿಗಳ ವರ್ಗಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣದಲ್ಲಿ ಡಿಎಸ್ಪಿಗಳ ಭಾರೀ ವರ್ಗಾವಣೆಯಾಗಿದೆ. ಡಿಜಿಪಿ ಅಂಜನಿಕುಮಾರ್ 41 ಡಿಎಸ್ಪಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ತೆಲಂಗಾಣದಾದ್ಯಂತ 41 ಡಿಎಸ್ಪಿಗಳನ್ನು ವರ್ಗಾವಣೆ ಮಾಡಿ ಡಿಜಿಪಿ ಅಂಜನಿ ಕುಮಾರ್ ಶನಿವಾರ ತಡರಾತ್ರಿ ಆದೇಶ ಹೊರಡಿಸಿದ್ದಾರೆ. ಪಂಜಗುಟ್ಟ ಎಸಿಪಿ ಗಣೇಶ್ ವರ್ಗಾವಣೆಗೊಂಡಿದ್ದು, ಅವರ ಜಾಗಕ್ಕೆ ಮೋಹನ್ ಕುಮಾರ್ ಅವರನ್ನು ನೇಮಿಸಲಾಗಿದೆ. ಧನಲಕ್ಷ್ಮಿ ಅವರನ್ನು ಕುಕಟ್ಪಲ್ಲಿ ಟ್ರಾಫಿಕ್ ಎಸಿಪಿಯಾಗಿ ನೇಮಿಸಲಾಗಿದೆ. ಅಬಿಡ್ಸ್ ಎಸಿಪಿಯಾಗಿ ಪೂರ್ಣಚಂದರ್, ಮಿರ್ಚೌಕ್ ಎಸಿಪಿಯಾಗಿ ದಾಮೋದರ್ ರೆಡ್ಡಿ, ಸಂತೋಷನಗರ ಎಸಿಪಿಯಾಗಿ ಮಹಮ್ಮದ್ ಗೌಸ್, ಚಾರ್ಮಿನಾರ್ ಎಸಿಪಿಯಾಗಿ ರುದ್ರ ಭಾಸ್ಕರ್, ಮಲಕಪೇಟೆ ಎಸಿಪಿಯಾಗಿ ಶ್ಯಾಮಸುಂದರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಇತ್ತೀಚೆಗಷ್ಟೇ ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳ ಭಾರೀ ವರ್ಗಾವಣೆಯಾಗಿತ್ತು. 91 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಗೊತ್ತೇ ಇದೆ. ಸರ್ಕಾರ ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆ ಮತ್ತು ಪೋಸ್ಟಿಂಗ್ ನೀಡಿದೆ. ಜಿಲ್ಲೆಯ ಎಸ್ಪಿ ಸೇರಿದಂತೆ ಹಲವು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ಒಂದೇ ತಿಂಗಳಲ್ಲಿ ಎರಡು ಬಾರಿ ಭಾರಿ ಸಂಖ್ಯೆಯಲ್ಲಿ ಐಪಿಎಸ್ ವರ್ಗಾವಣೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಜನವರಿ 4 ರಂದು 29 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರೆ, ಸರ್ಕಾರ ಇತ್ತೀಚೆಗೆ ಮತ್ತೊಮ್ಮೆ 91 ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಈ ಪೈಕಿ ದೀರ್ಘಾವಧಿಯಲ್ಲಿದ್ದವರನ್ನು ವರ್ಗಾವಣೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!