May 22, 2026
Friday, May 22, 2026
spot_img

ಮಹಾಮಾರಿ ಎಬೋಲಾ ತಡೆಗೆ ಮಾಸ್ಟರ್ ಪ್ಲಾನ್: ಕ್ವಾರಂಟೈನ್ ಸೆಂಟರ್, ಐಸೊಲೇಶನ್ ಹೆಚ್ಚಿಸಲು ಕೇಂದ್ರದ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಫ್ರಿಕಾದಲ್ಲಿ ಕೋವಿಡ್‌ಗಿಂತಲೂ ಅಪಾಯಕಾರಿಯಾದ ಎಬೋಲಾ ವೈರಸ್ ತೀವ್ರವಾಗಿ ಹರಡುತ್ತಿರುವುದರಿಂದ ಭಾರತ ಸರ್ಕಾರ ದೇಶಾದ್ಯಂತ ಹೈ-ಅಲರ್ಟ್ ಘೋಷಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನವದೆಹಲಿಯಲ್ಲಿ ಆಯೋಜನೆಗೊಂಡಿದ್ದ ಭಾರತ-ಆಫ್ರಿಕಾ ಒಕ್ಕೂಟದ ಶೃಂಗಸಭೆಯನ್ನು ವಿದೇಶಾಂಗ ಸಚಿವಾಲಯವು ಅಧಿಕೃತವಾಗಿ ಮುಂದೂಡಿದೆ.

ದೆಹಲಿ ಸೇರಿದಂತೆ ದೇಶದ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತೀವ್ರ ನಿಗಾ ವಹಿಸಲಾಗುತ್ತಿದ್ದು, ಹೈ-ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಹೆಲ್ತ್ ಸ್ಕ್ರೀನಿಂಗ್ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ನೀಡಲಾಗಿದೆ.

ಕೇಂದ್ರ ಸರ್ಕಾರದ ಪ್ರಮುಖ ಸೂಚನೆಗಳು:

ಕ್ವಾರಂಟೈನ್ ಸೆಂಟರ್ ಸ್ಥಾಪನೆ: ಪ್ರತ್ಯೇಕ ಐಸೋಲೇಷನ್ ಸೌಲಭ್ಯವಿರುವ ಕ್ವಾರಂಟೈನ್ ಕೇಂದ್ರಗಳನ್ನು ಸಿದ್ಧಪಡಿಸುವುದು.

ಸಿಬ್ಬಂದಿ ಹೆಚ್ಚಳ: ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸಲು ಆರೋಗ್ಯ ಸಿಬ್ಬಂದಿಯ ನಿಯೋಜನೆ ಹೆಚ್ಚಿಸುವುದು.

ತುರ್ತು ವಾಹನ ಸೌಲಭ್ಯ: ಶಂಕಿತ ರೋಗಿಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಪ್ರತ್ಯೇಕ ಅಂಬುಲೆನ್ಸ್‌ಗಳನ್ನು ಕಾಯ್ದಿರಿಸುವುದು.

ಆರೋಗ್ಯ ಕಾರ್ಯಕರ್ತರಿಗೆ ತರಬೇತಿ: ಎಬೋಲಾ ಸೋಂಕಿನ ಲಕ್ಷಣಗಳು ಮತ್ತು ಚಿಕಿತ್ಸಾ ವಿಧಾನಗಳ ಕುರಿತು ಆರೋಗ್ಯ ಸಿಬ್ಬಂದಿಗೆ ವಿಶೇಷ ಅರಿವು ಮೂಡಿಸುವುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !