ಮೇ 20 ರಂದೇ ಏಕನಾಥ ಶಿಂದೆಗೆ ಸಿಎಂ ಆಫರ್​​ ನೀಡಲಾಗಿತ್ತು: ಅಚ್ಚರಿಯ ಹೇಳಿಕೆ ನೀಡಿದ ಆದಿತ್ಯ ಠಾಕ್ರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ನಡುವೆ ಸಚಿವ ಆದಿತ್ಯ ಠಾಕ್ರೆ ಮತ್ತೊಂದು ಬಿಗ್​ ಟ್ವಿಸ್ಟ್​ ನೀಡಿದ್ದು, ಮೇ 20ರಂದೇ ಏಕನಾಥ ಶಿಂದೆ ಅವರಿಗೆ ಸಿಎಂ ಉದ್ದವ್​ ಠಾಕ್ರೆ ಅವರು ಮುಖ್ಯಮಂತ್ರಿ ಪದವಿಯ ಆಫರ್​​ ನೀಡಿದ್ದರು. ಆದರೆ, ಇದಾದ ಸರಿಯಾಗಿ ಒಂದೇ ತಿಂಗಳಿಗೆ ಶಿಂದೆ ಬಂಡಾಯ ಎದ್ದಿದ್ದಾರೆ ಎಂಬ ಬಹಿರಂಗಪಡಿಸಿದ್ದಾರೆ.

ಮಹಾ ವಿಕಾಸ್ ಆಘಾಡಿ ಸರ್ಕಾರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಏಕನಾಥ ಶಿಂದೆ ಬಂಡಾಯ ಸಾರಿದ್ದಾರೆ. ಇದರಿಂದ ಮಹಾರಾಷ್ಟ್ರ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗಿರುವುದಲ್ಲದೇ ಸರ್ಕಾರವನ್ನೇ ಪತನದಂಚಿಗೆ ಬಂದು ನಿಂತಿದೆ.

ಇದರ ನಡುವೆ ಇದೀಗ ಆದಿತ್ಯ ಠಾಕ್ರೆ ಅಚ್ಚರಿಯ ಅಂಶ ಬಯಲಿಗೆ ಹಾಕಿದ್ದಾರೆ. ಉದ್ಧವ್ ಠಾಕ್ರೆ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಯಾದ ಏಕನಾಥ ಶಿಂದೆ ಅವರಿಗೆ ಸಿಎಂ ಸ್ಥಾನದ ಆಫರ್​ ನೀಡಿದ್ದರು. ಇದನ್ನು ಕೇಳಿಯೇ ಶಿಂಧೆ ದಿಗ್ಭ್ರಮೆಗೊಂಡಿದ್ದರು ಎಂದು ಜ್ಯೂನಿಯರ್​ ಠಾಕ್ರೆ ಹೇಳಿದ್ದಾರೆ.
ಇದಾದ ಒಂದು ತಿಂಗಳಿಗೆ ಜೂನ್ 20ರಂದು ಶಿಂದೆ ಮತ್ತು ಅವರ ಗುಂಪಿನ ಬಂಡಾಯ ಪ್ರಾರಂಭವಾಯಿತು ಎಂದೂ ಆದಿತ್ಯ ಠಾಕ್ರೆ ಆರೋಪಿಸಿದ್ದಾರೆ.

ಎಲ್ಲ ‘ಕೆಸರು’ಗಳು ತಾನಾಗಿಯೇ ಪಕ್ಷದಿಂದ ಹೊರ ಹೋಗಿರುವುದು ‘ಒಳ್ಳೆಯ ವಿಮೋಚನೆ. ಈಗ ಚಪ್ಪಾಳೆಗಳ ಗುಡುಗಿನ ನಡುವೆ ಅದು ಸ್ವಚ್ಛವಾಗಿ ಬಿಡುತ್ತದೆ. ಜೊತೆಗೆ ಪ್ರಸ್ತುತ ಗುವಾಹಟಿಯ ಪಂಚತಾರಾ ಹೋಟೆಲ್‌ನಲ್ಲಿ ಬೀಡುಬಿಟ್ಟಿರುವ ಶಾಸಕರು ‘ದ್ರೋಹಿ’ಗಳಾಗಿದ್ದಾರೆ ಎಂದು ಟೀಕಿಸಿದ್ದಾರೆ.

ತಂದೆ ಉದ್ಧವ್​ ಠಾಕ್ರೆ ಹೇಳಿಕೆಗೆ ವ್ಯತಿರಿಕ್ತವಾದ ಹೇಳಿಕೆಯನೀಡಿದ ಆದಿತ್ಯ ,ಶಿವಸೇನೆವನ್ನು ತೊರೆಯಲು ಬಯಸುವವರಿಗೆ ಅಥವಾ ಪಕ್ಷಕ್ಕೆ ಮರಳಲು ಬಯಸುವವರಿಗೆ ಪಕ್ಷದ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದು ಸಿಎಂ ಠಾಕ್ರೆ ಹೇಳಿದ್ದರು. ಆದರೆ, ಬಂಡಾಯ ಶಾಸಕರನ್ನು ಶಿವಸೇನೆಗೆ ಮರಳಿ ತೆಗೆದುಕೊಳ್ಳಲಾಗುವುದಿಲ್ಲ ಎಂದು ಆದಿತ್ಯ ಠಾಕ್ರೆ ಗುಡುಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!