ಹೊಸ ದಿಗಂತ ವರದಿ, ರಾಯಚೂರು :
ಪ್ರತಿಯೊಬ್ಬ ಭಾರತೀಯರಿಗೂ ಶ್ರೀರಾಮ ಆರಾಧ್ಯವಾಗಿದ್ದಾರೆ. ಶ್ರೀರಾಮನ ಆದರ್ಶ ಜನಾನುರಾಗವನ್ನು ಸಿದ್ಧರಾಮಯ್ಯ ಅವರೂ ಪಡೆದುಕೊಳ್ಳಲಿ. ಅದನ್ನು ನಾವು ಅಭಿನಂದಿಸೋಣ ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಹೇಳಿದರು.
ಮಂಗಳವಾರ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮಾಜಿ ಸಚಿವ ಎಚ್.ಆಂಜನೇಯ ಅವರು ಸಿದ್ಧರಾಮಯ್ಯನವರೇ ನಮಗೆ ಶ್ರೀರಾಮ ಎನ್ನುವ ರೀತಿಯಲ್ಲಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶ್ರೀಗಳು. ಯಾರು ಏನು ಹೇಳಿಕೆ ನೀಡಿದ್ದಾರೆ ಎಂಬುವುದರ ಬಗ್ಗೆ ಗಮನಿಸಿಲ್ಲ. ರಾಮನ ಹೋಲಿಕೆಯನ್ನು ಇನ್ನೊಬ್ಬರಿಗೆ ಹೋಲಿಸುವುದು ಸರಿಯಲ್ಲ. ಎಲ್ಲರೂ ರಾಮನಂತೆ ನೀನು ಇರು ಎಂಬ ದೃಷ್ಟಾಂತ. ರಾಮನ ಹೆಸರನ್ನು ಸಿದ್ಧರಾಮಯ್ಯನವರ ಇಟ್ಟುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮನ ಆದರ್ಶ ಹಾಗೂ ಜನಾನುರಾಗ ಪಡೆದುಕೊಳ್ಳಲಿ ಎಂದು ತಿಳಿಸಿದರು.
ಅಯೋಧ್ಯದಲ್ಲಿ ರಾಮನ ಮಂದಿರ ನಿರ್ಮಾಣ ಹಾಗೂ ಪರಿರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ನಮ್ಮ ಆರಾಧ್ಯ ಪ್ರಭುವಿನ ಮಂದಿರ ನಿರ್ಮಾಣ ನಮ್ಮ ಹಕ್ಕಾಗಿದೆ ಎಂದರು.
ಶ್ರೀರಾಮ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಸಮಸ್ತ ಭಾರತೀಯರಿಗೆ ಅತ್ಯಂತ ಅನುಕರಣೀಯ ಆರಾಧ್ಯನಾಗಿದ್ದಾನೆ ಎಂದು ತಿಳಿಸಿದರು.