October 12, 2026
Monday, October 12, 2026
spot_img

ವಿಶ್ವಾಸದ ರಕ್ಷೆಯ ದಾರ ಸದಾ ಗಟ್ಟಿಯಾಗಿರಲಿ : ರಕ್ಷಾಬಂಧನಕ್ಕೆ ಶುಭಕೋರಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ದೇಶಾದ್ಯಂತ ಸಂಭ್ರಮದ ರಕ್ಷಾಬಂಧನವನ್ನು ಆಚರಣೆ ಮಾಡಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ ಜನತೆಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಎಕ್ಸ್‌ನಲ್ಲಿ ಪ್ರಧಾನಿ ಟ್ವೀಟ್‌ ಮಾಡಿದ್ದು, ರಕ್ಷಾಬಂಧನ ಹಬ್ಬದ ಶುಭಾಷಯಗಳು. ಈ ಶುಭ ಸಂದರ್ಭದಲ್ಲಿ ನಿಮ್ಮ ಜೀವನ ಸದಾ ಖುಷಿಯಾಗಿರಲಿ. ಸಮೃದ್ಧಿ ಹಾಗೂ ಸಫಲತೆ ತುಂಬಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಸ್ನೇಹ, ಪ್ರೀತಿ ಹಾಗೂ ವಿಶ್ವಾಸದ ದಾರ ಸದಾ ಗಟ್ಟಿಯಾಗಿರಲಿ ಎಂದಿದ್ದಾರೆ.

ವಿಶ್ವ ಸಂಸ್ಕೃತ ದಿನದ ಶುಭಾಯಶಗಳು

ರಾಖಿ ಹಬ್ಬದ ಜೊತೆಗೆ ಇಂದು ವಿಶ್ವ ಸಂಸ್ಕೃತ ದಿನವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸಂಸ್ಕೃತದಲ್ಲಿಯೇ ಟ್ವೀಟ್‌ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ. ಶ್ರಾವಣ ಪೂರ್ಣಿಮೆಯ ದಿನದಂದು ಎಲ್ಲರಿಗೂ ಸಂಸ್ಕೃತ ದಿನದ ಶುಭಾಶಯಗಳು. ಭಾರತದ ಜ್ಞಾನ, ಚಿಂತೆ ಹಾಗೂ ಸೃಜನಶೀಲತೆಯನ್ನು ಸಾರುವ ನಮ್ಮ ಸಂಸ್ಕೃತ ಭಾಷೆ ಇನ್ನಷ್ಟು ವಿಸ್ತಾರವಾಗಲಿ. ಈಗಲೂ ಸಂಸ್ಕೃತ ಭಾಷೆಯನ್ನು ಮಾತನಾಡುವ ಎಷ್ಟೋ ಜನರಿದ್ದಾರೆ. ಅವರು ತಮ್ಮ ಭಾಷೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು. ಭಾರತದಲ್ಲಿ ಯಾರಿಗೆಲ್ಲಾ ಸಂಸ್ಕೃತ ಓದಲು ಹಾಗೂ ಬರೆಯಲು ಬರುತ್ತದೆಯೋ ಅವರು ಈ ಸಂಸ್ಕೃತ ನಿಧಿಯನ್ನು ಇತರರಿಗೆ ನೀಡಿ ಭಾಷೆಯನ್ನು ಬೆಳೆಸಬೇಕು ಎಂದು ಕರೆ ನೀಡಿದ್ದಾರೆ.

Must Read