ಇಂಗ್ಲೆಂಡ್‌ ʼಟೆಸ್ಟ್‌ʼಗೆ ಕ್ಯಾಪ್ಟನ್‌ ರೋಹಿತ್‌ ಡೌಟ್;‌ ತಂಡ ಸೇರುವಂತೆ ಕನ್ನಡಿಗನಿಗೆ ಬುಲಾವ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕೊರೋನಾ ಸೋಂಕಿತರಾಗಿರುವ ಭಾರತ ತಂಡದ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್ ನಲ್ಲಿ ನಡೆಯಲಿರುವ ಕೊನೆಯ ಟೆಸ್ಟ್‌ನಲ್ಲಿ ಕಣಕ್ಕಿಳಿಯುವುದು ಅನುಮಾನವಾಗಿದೆ. ಹೀಗಾಗಿ ರೋಹಿತ್‌ ಬದಲಿಯಾಗಿ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರನ್ನು ಬಿಸಿಸಿಐ ತಂಡಕ್ಕೆ ಸೇರ್ಪಡೆಗೊಳಿಸಿದೆ.
ಲೀಸೆಸ್ಟರ್‌ಶೈರ್ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ರೋಹಿತ್ ಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. 31 ವರ್ಷದ ಮಯಾಂಕ್ ಅಗರ್ವಾಲ್‌ ಇಂಗ್ಲೆಂಡ್‌ ಸರಣಿಗೆ ಪ್ರಕಟಿಸಲಾಗಿದ್ದ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಮಾರ್ಚ್‌ನಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ಅವರು ಭಾರತ ತಂಡದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.
21 ಟೆಸ್ಟ್ ಪಂದ್ಯಗಳನ್ನು ಆಡಿರುವ ಮಾಯಾಂಕ್ ನಾಲ್ಕು ಶತಕಗಳು ಮತ್ತು ಆರು ಅರ್ಧಶತಕಗಳೊಂದಿಗೆ 41.33 ಸರಾಸರಿಯಲ್ಲಿ 1488 ರನ್ ಗಳಿಸಿದ್ದಾರೆ. ಸೌತ್‌ ಆಪ್ರಿಕಾ ವಿರುದ್ಧ 243 ರನ್ ಕಲೆಹಾಕಿರುವುದು ಟೆಸ್ಟ್‌ ನಲ್ಲಿ ಮಾಯಾಂಕ್‌ ಗಳಿಸಿರುವ ಗರಿಷ್ಠ ಮೊತ್ತ.
ಆರ್‌ ಟಿಪಿಸಿಆರ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದರೆ ಮಯಾಂಕ್‌ ಯಾವುದೇ ಕ್ವಾರಂಟೈನ್‌ ಇಲ್ಲದೆ ತಂಡವನ್ನು ಸೇರಬಹುದಾಗಿದೆ. ಕಳೆದ ವರ್ಷ ಕೊವಿಡ್‌ ಕಾರಣದಿಂದ ಮುಂದೂಡಲ್ಪಟ್ಟಿದ್ದ 5ನೇ ಟೆಸ್ಟ್‌ ಪಂದ್ಯ ಜುಲೈ 01 ರಿಂದ ಪ್ರಾರಂಭಗೊಳ್ಳಲಿದೆ. ಆಭರತ ತಂಡ 2-1 ರಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ರೋಹಿತ್ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಯಾರು ಮುನ್ನಡೆಸುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!