ನೀವು ಏನ್​ ಕೆಲಸ ಮಾಡಿದ್ದೀರಿ ಎಂದು ಕೇಳಿದ ಯುವಕನಿಗೆ ಕಪಾಳ ಮೋಕ್ಷ ಮಾಡಿದ ಎಂ.ಬಿ. ಪಾಟೀಲ್!

ಹೊಸದಿಗಂತ ವರದಿ, ವಿಜಯಪುರ:

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂ.ಬಿ. ಪಾಟೀಲ ಯುವಕನೊಬ್ಬನಿಗೆ ಕಪಾಳ ಮೋಕ್ಷ ಮಾಡಿದ ವಿಡಿಯೋ ಕ್ಲಿಪಿಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇನ್ನಿಲ್ಲದ ಟೀಕೆಗೆ ಗ್ರಾಸವಾಗಿದೆ.

ಜಿಲ್ಲೆಯ ಬಬಲೇಶ್ವರ ತಾಲೂಕಿನ ಪ್ರಚಾರಕ್ಕೆ ಎಂ‌.ಬಿ. ಪಾಟೀಲ ತೆರಳಿದಾಗ, ದೇವಾಪೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಏನ್​ ಕೆಲಸ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ? ಕುಪಿತಗೊಂಡ ಎಂ.ಬಿ.ಪಾಟೀಲ, ಯುವಕನ ಕಪಾಳಕ್ಕೆ ಹೊಡೆದಿರುವ ದೃಶ್ಯ ಸೆರೆಯಾಗಿದೆ.

ಚುನಾವಣೆ​ ಬರ್ತಿದ್ದಂತೆ 5 ವರ್ಷದ ನಂತರ ಗ್ರಾಮಕ್ಕೆ ಆಗಮಿಸಿದ್ದೀರಿ. ನಮ್ಮ ಗ್ರಾಮಕ್ಕೆ ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಯುವಕ ಹಣಮಂತ ತುಪ್ಪದ, ಎಂ.ಬಿ. ಪಾಟೀಲಗೆ ಪ್ರಶ್ನಿಸಿದ್ದಾನೆ‌‌. ಯುವಕನ ಪ್ರಶ್ನೆಗೆ ಉತ್ತರಿಸಲಾಗದೆ ಶಾಸಕ ಎಂ.ಬಿ. ಪಾಟೀಲ ಆತನ ಕೆನ್ನೆಗೆ ಬಲವಾಗಿ ಬಾರಿಸಿ, ಹೊರ ದಬ್ಬಿರುವ ವಿಡಿಯೋ ಜಿಲ್ಲೆಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!