HEALTH | ತುಸು ಹೊತ್ತು ಧ್ಯಾನ, ದಿನವೆಲ್ಲಾ ಉತ್ಸಾಹ, ನಿಜಕ್ಕೂ ಲಾಭ ಇದ್ಯಾ?

ದೇಹಕ್ಕೆ ತರಬೇತಿ ನೀಡುವ ಹಾಗೆ ಮನಸ್ಸಿಗೂ ತರಬೇತಿ ನೀಡಬಹುದು, ಅರಿವಿನ ಕ್ರಮವನ್ನು ಧ್ಯಾನ ಎನ್ನಬಹುದು. ದಿನಕ್ಕೆ ಹತ್ತು ನಿಮಿಷ ಧ್ಯಾನ ನಿಮ್ಮ ಜೀವನವನ್ನು, ನೀವು ಜೀವನವನ್ನು ನೋಡುವ ಪರಿಯನ್ನು ಬದಲಾಯಿಸಿಬಿಡುತ್ತದೆ. ಧ್ಯಾನದಿಂದ ಆಗುವ ಲಾಭಗಳೇನು?

  • ಯಾವುದೇ ಒಂದು ಸವಾಲು ಎದುರಾಗಿದೆ, ಅದನ್ನು ಬಗೆಹರಿಸಲು ಹೊಸ ದಾರಿ, ಹೊಸ ಮಾರ್ಗ ಅರಿಯುತ್ತದೆ.
  • ನಿಮ್ಮ ಒತ್ತಡವನ್ನು ನಿವಾರಣೆಗೊಳಿಸುವ ವಿಧಾನ ನಿಮ್ಮ ಹಿಡಿತಕ್ಕೆ ಸಿಗುತ್ತದೆ.
  • ನಿಮ್ಮ ದೇಹ, ನಿಮ್ಮ ಮನಸ್ಸು, ನಿಮ್ಮ ಬಗ್ಗೆ ಆಲೋಚಿಸಲು ಸಮಯ ಸಿಗುತ್ತದೆ.
  • ಭವಿಷ್ಯದ ಆಸೆ ಮರೆತು, ಹಿಂದಿನ ನೋವು ಬಿಟ್ಟು ಇಂದು ಬದುಕಿರೋಕೆ ಸಹಾಯ ಮಾಡುತ್ತದೆ.
  • ಕೆಟ್ಟ ಆಲೋಚನೆಗಳಲ್ಲೇ ಮುಳುಗಿರುವ ವ್ಯಕ್ತಿ ನೀವಾದರೆ, ಧ್ಯಾನ ನಿಮಗೆ ಹೇಳಿ ಮಾಡಿಸಿದ್ದು.
  • ಹೊಸ ಹೊಸ ಇಮ್ಯಾಜಿನೇಷನ್ ಹಾಗೂ ಕ್ರಿಯೇಟಿವ್ ಆಲೋಚನೆಗಳು ನಿಮ್ಮದಾಗುತ್ತದೆ.
  • ತಾಳ್ಮೆ ಕಳೆದುಕೊಳ್ಳುವ ವ್ಯಕ್ತಿ ನೀವಾಗಿದ್ದರೆ, ಧ್ಯಾನ ರೂಢಿಸಿಕೊಳ್ಳಿ
  • ಮಾನಸಿಕವಾಗಿ ನೀವು ದೃಢರಾಗುತ್ತೀರಿ, ಯಾವುದಕ್ಕೂ ಜಗ್ಗದ ಗಟ್ಟಿ ಮನುಷ್ಯನಾಗುತ್ತೀರಿ.
  • ಮರೆಗುಳಿತನ ನಿಮ್ಮನ್ನು ಕಾಡೋದಿಲ್ಲ.
  • ಕರುಣೆ, ಪ್ರೀತಿ ಗುಣಗಳು ನಿಮ್ಮದಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!