Wednesday, September 28, 2022

Latest Posts

ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಮೀಟೂ ಬಿರುಗಾಳಿ: ಚರ್ಚೆಗೆ ಕಾರಣವಾದ ನಟಿಯ ಹೇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕನ್ನಡ ಚಿತ್ರರಂಗದ ವಿರುದ್ಧ ನಟಿ ಆಶಿತಾ ಮೀಟೂ ಆರೋಪ ಮಾಡಿದ್ದು, ಚಿತ್ರರಂಗದಲ್ಲಿ ಆರೋಗ್ಯಕರ ವಾತಾವರಣ ಇಲ್ಲದ ಕಾರಣಕ್ಕೆ ತಾನು ಸಿನಿರಂಗದಿಂದಲೇ ದೂರಾಗಿದ್ದಾಗಿ ತಿಳಿಸಿದ್ದಾರೆ.
ಈ ಮೂಲಕ ನಟಿ ಆಶಿತಾ ಆರೋಪ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಬಿರುಗಾಳಿ ಬೀಸಿದ್ದು, ಚರ್ಚೆಗೆ ಕಾರಣವಾಗಿದೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಆಶಿತಾ, ಅವರು ಬಯಸಿದಂತೆ ಇರಲಿಲ್ಲ, ಸೆಟ್ ನಲ್ಲಿ ಕಿರುಕುಳ ಕೊಡುತ್ತಿದ್ದರು.ನಾನು ಅವರು ಹೇಳಿದಂತೆ ಅಡ್ಜಸ್ಟ್ ಮೆಂಟ್ ಆಗಿಲ್ಲ. ಹೇಳಿದಂತೆ ಮಾಡಿದರೆ ಎಕ್ಸ್ಟ್ರಾ ಪೇಮೆಂಟ್ ಕೊಡುವುದಾಗಿ ಹೇಳುತ್ತಿದ್ದರು. ನಾನು ಅದಕ್ಕೆ ಒಪ್ಪಲಿಲ್ಲ. ಚಿತ್ರರಂಗದಲ್ಲಿ ಒಳ್ಳೆಯ, ಆರೋಗ್ಯಕರ ವಾತಾವರಣ ಇರಲಿಲ್ಲ. ಆ ಕಾರಣಕ್ಕಾಗಿ ತಾನು ಚಿತ್ರರಂಗದಿಂದ ದೂರ ಉಳಿದಿದ್ದಾಗಿ ಹೇಳಿದ್ದಾರೆ.
ನಟಿ ಆಶಿತಾ ರೋಡ್ ರೋಮಿಯೋ, ಹಾರ್ಟ್ ಬೀಟ್, ತವರಿನ ಸಿರಿ, ಬಾ ಬಾರೋ ರಸಿಕ, ಆಕಾಶ್ ಚಿತ್ರಗಳಲ್ಲಿ ಅಭಿನಯಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!