ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮರಥೋತ್ಸವಕ್ಕೆ ಚಾಲನೆ ದೊರಕಿದ್ದು, ಉತ್ಸವದಲ್ಲಿ ಲಕ್ಷಾಂತರ ಜನರು ಭಕ್ತಿಯಲ್ಲಿ ಮಿಂದೆದಿದ್ದಾರೆ.
ಉತ್ಸವದಲ್ಲಿ ಪಾಲ್ಗೊಳ್ಳಲು ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದು, ಜಿಲ್ಲಾಡಳಿತದ ಖಜಾನೆಯಿಂದ ರತ್ನಖಚಿತ ವೈರಮುಡಿ ಮೇಲೆಕೋಟೆಗೆ ರವಾನಿಸಲಾಗಿದೆ.
ಮಂಡ್ಯದ ಲಕ್ಷ್ಮೀ ಜನಾರ್ಧನ ದೇಗುಲದಲ್ಲಿ ವೈರಮುಡಿಗೆ ಮೊದಲ ಪೂಜೆ ನಡೆದಿದ್ದು, ನಂತರ ಮೇಲುಕೋಟೆ ತಲುಪಿದೆ. ವೈರಮುಡಿ ಸಾಗುವ ಮಾರ್ಗದಲ್ಲಿ ಸಿಗುವ ಎಲ್ಲಾ ಹಳ್ಳಿಗಳಲ್ಲಿಯೂ ಗ್ರಾಮಸ್ಥರು ದೇವರಿಗೆ ಪೂಜೆ ಮಾಡಿದ್ದಾರೆ.