ಅಂಕೋಲಾ: ವೈಶ್ಯ ಸಮಾಜದ ಸ್ವಾತಂತ್ರ್ಯಯೋಧರ ಸ್ಮರಣೆ, ಉಪನ್ಯಾಸ

ಹೊಸದಿಗಂತ ವರದಿ, ಅಂಕೋಲಾ:
ಇಲ್ಲಿಯ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಭಾನುವಾರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಭಾನುವಾರ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ವೈಶ್ಯ ಸ್ವಾತಂತ್ರ್ಯಯೋಧರ ಹೋರಾಟದ ನೆನಪಿನ ಸಮಾರಂಭವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದ 15 ವೈಶ್ಯ ಸಮಾಜದ ಸ್ವಾತಂತ್ರ್ಯಯೋಧರ ಭಾವಚಿತ್ರ ಅನಾವರಣಗೊಳಿಸಿದರು.
ಸ್ಮರಣ ಸಂಚಿಕೆಯನ್ನು ಕರ್ನಾಟಕ ಆರ್ಯ ವೈಶ್ಯಮಹಾ ಸಭಾದ ಅಧ್ಯಕ್ಷ ಆರ್.ಪಿ.ರವಿಶಂಕರ ಬಿಡುಗಡೆ ಮಾಡಿದರು. ಯುವಾ ಬ್ರಿಗೆಡ್ ನ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡಿದರು.
ಅಧ್ಯಕ್ಷತೆಯನ್ನು ಮನೋಹರ ಗೋವಿಂದ ಮಲ್ಮನೆ ಮುಂಬೈ ವಹಿಸಿದ್ದರು. ಅತಿಥಿಗಳಾಗಿ ಪ್ರಮುಖರಾದ ಶೇಷಗಿರಿ ಗೋವಿಂದ ಶೆಟ್ಟಿ ಮಲ್ಮನೆ, ಭಾವಿಕೇರಿ, ದಿಗಂಬರ ಫಕೀರ ಹೊಸ್ಮನೆ, ಭಾವಿಕೇರಿ ರಾಮಚಂದ್ರ ಸುಬ್ರಾಯ ಶೆಟ್ಟಿ, ಭಾವಿಕೇರಿ, ಶ್ರೀಮತಿ ಗೀತಾ ಆನಂದು ಬಡಗೇರಿ, ಕೃಷ್ಣಾನಂದ ವಿಠಲ ಶೆಟ್ಟಿ, ಹೊನ್ನೇಕೇರಿ, ಮನೋಹರ ಶಂಕರ ಶೆಟ್ಟಿ, ಅಂಬಾರಕೊಡ್ಲ, ಮೋಹನ ದುರ್ಗ ಶೆಟ್ಟಿ, ಕಂತ್ರಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾರದಾ ಫಕೀರ ಶೆಟ್ಟಿ, ಭಾವಿಕೇರಿ ,ಭವಾನಿ ಶಾಂತಾರಾಮ ಶೆಟ್ಟಿ, ವಾಲಗ
ವತ್ಸಲಾ ಶಂಕರ ಶೆಟ್ಟಿ, ಅಂಬಾರಕೊಡ್ಲ ಅವರನ್ನು ಸನ್ಮಾನಿಸಲಾಯಿತು.
ಸ್ವಾತಂತ್ರ್ಯ ಹೋರಾಟಗಾರರಾದ ದಿ. ನಾಗಪ್ಪ ಹರಿಯಪ್ಪ ಶೆಟ್ಟಿ, ಅಂಕೋಲಾ ದಿ. ವಿಠಲ ನಾಗಪ್ಪ ಶೆಟ್ಟಿ, ಕಾಂಚನ್ ದಿ. ಸುಬ್ರಹ್ಮಣ್ಯ ನಾಗಪ್ಪ ಶೆಟ್ಟಿ, ಉಳುವರೆ ಅವರನ್ನು ಸ್ಮರಿಸಲಾಯಿತು.
ಗಾಯಕಿ ವರ್ಷಿಣಿ ಶೆಟ್ಟಿ ವಂದೇ ಮಾತರಂ ಹಾಡಿದರು. ಸ್ವಾಗತ ಗೀತೆ ಮತ್ತು ನಾಡಗೀತೆಯನ್ನು ಗೀತಾ ಶೆಟ್ಟಿ ಸಂಗಡಿಗರು ಹಾಡಿದರು.
ಸಂಚಾಲಕ ಮನೋಹರ ಗೋವಿಂದ ಮಲ್ಮನೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!