ಬ್ಯಾಂಕ್‌ಗೆ ಬಂದ ಬುರ್ಖಾಧಾರಿಗಳು ಮಾಡಿದ್ದೇನು ಗೊತ್ತಾ? ಅಸಲಿ ವಿಷಯ ತಿಳಿದ ಸಿಬ್ಬಂದಿಗೆ ಶಾಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಳ್ಳರು ರಾತ್ರಿಯಷ್ಟೇ ಅಲ್ಲ, ಇದೀಗ ಹಗಲು ದರೋಡೆಗಿಳಿದಿದ್ದಾರೆ. ಮುಸ್ಲಿಂ ಮಹಿಳೆಯರು ಧರಿಸುವ ಬುರ್ಖಾಗಳನ್ನು ಕಳ್ಳರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಬ್ಯಾಂಕ್‌ಗೆ ನುಗ್ಗಿ ದರೋಡೆಗೆ ಯತ್ನಿಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಖಾಸಗಿ ಬ್ಯಾಂಕ್ ಆಗಿದೆ. ಸಿಬ್ಬಂದಿ ತಮ್ಮ ಕೆಲಸ ಮಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಇಬ್ಬರು ಬುರ್ಖಾಧಾರಿಗಳು ಹೆಂಗಸರೋ ಅಥವಾ ಗಿರಾಕಿಯೋ ಎಂದು ನೋಡುವಷ್ಟರಲ್ಲಿ ಆ ಇಬ್ಬರು ತಮ್ಮ ಕೈಚಳಕ ತೋರಿಸಿದ್ದಾರೆ.

ಒಳಗೆ ಬಂದು ಸಿಬ್ಬಂದಿಗೆ ಗನ್ ತೋರಿಸಿ ಹಣ ಕೊಡಿ ಇಲ್ಲವಾದಲ್ಲಿ ಸಾಯಿಸುತ್ತೇವೆ ಬೆದಿರಿಸಿದ್ದಾರೆ. ಕಳ್ಳನೊಬ್ಬ ಬ್ಯಾಂಕ್ ಉದ್ಯೋಗಿಯ ಕೈ ಕಟ್ಟಿ ಹಾಕುವ ಕೆಲಸ ಮಾಡುತ್ತಿದ್ದಾನೆ. ಅಷ್ಟರಲ್ಲಿ ಎಚ್ಚೆತ್ತ ಬ್ಯಾಂಕ್‌ನ ಇತರ ಸಿಬ್ಬಂದಿ ಅಲಾರಾಂ ಹೊಡೆದಿದ್ದಾರೆ. ಅಷ್ಟರಲ್ಲಿ ಭಯಗೊಂಡ ಕಳ್ಳನೊಬ್ಬ ಅಲ್ಲಿಂದ ಓಡಿ ಹೋದ. ಮತ್ತೊಬ್ಬ ಕಳ್ಳ ಕೂಡ ಪರಾರಿಯಾಗಲು ಯತ್ನಿಸಿದ ವೇಳೆ ಬ್ಯಾಂಕ್ ಉದ್ಯೋಗಿಯೊಬ್ಬರು ಸಾಹಸ ಮೆರೆದಿದ್ದಾರೆ. ಕಳ್ಳ ಓಡಿಹೋಗದಂತೆ ಬಿಗಿಯಾಗಿ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದರು. ಪರಾರಿಯಾಗಿರುವ ಮತ್ತೊಬ್ಬ ಕಳ್ಳನನ್ನು ಹಿಡಿಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಬುರ್ಖಾ ಧರಿಸಿದ ಕಳ್ಳರು ಬ್ಯಾಂಕ್ ದರೋಡೆಗೆ ಯತ್ನಿಸುತ್ತಿರುವುದು, ಬ್ಯಾಂಕ್ ಸಿಬ್ಬಂದಿ ಕಳ್ಳನನ್ನು ಹಿಡಿಯುತ್ತಿರುವುದು… ಇದೆಲ್ಲವೂ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!