Tuesday, March 28, 2023

Latest Posts

ಜಾಗತಿಕ ಜೈವಿಕ ಇಂಧನ ಕ್ಷೇತ್ರವನ್ನು ಮುನ್ನಡೆಸೋಕೆ ಈ ಎರಡು ದೇಶಗಳೊಂದಿಗೆ ಒಕ್ಕೂಟ ರಚಿಸಿದೆ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಗಳಿಂದಾಗಿ ಪಳೆಯುಳಿಕೆ ಇಂಧನಗಳ ಬಳಕೆ ಕಡಿಮೆ ಮಾಡಲು ಜಾಗತಿಕ ಮಟ್ಟದಲ್ಲಿ ಚರ್ಚೆಗಳಾಗುತ್ತಿವೆ. ಈ ನಿಟ್ಟಿನಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಪಳೆಯುಳಿಕೆ ಇಂಧನಗಳ ಬದಲಾಗಿ ಜೈವಿಕ ಇಂಧನಗಳನ್ನು ಹೆಚ್ಚಾಗಿ ಬಳಕೆ ಮಾಡುವ ಚರ್ಚೆಗಳು ಜಾಗತಿಕ ಮಟ್ಟದಲ್ಲಾಗುತ್ತಿದ್ದು ಇದೀಗ ಜೈವಿಕ ಇಂಧನ ಕ್ಷೇತ್ರದಲ್ಲಿ ವ್ಯಾಪಕವಾಗಿ ಕೆಲಸ ಮಾಡಲು ಭಾರತವು ಇತರ ಎರಡು ದೇಶಗಳೊಂದಿಗೆ ಒಕ್ಕೂಟ ರಚಿಸಿಕೊಂಡಿದ್ದು ಮುಂದಿನ ಕೆಲವು ತಿಂಗಳುಗಳ ಕಾಲ ಮೂರೂ ದೇಶಗಳೂ ಒಟ್ಟಾಗಿ ಕೆಲಸ ಮಾಡಲಿವೆ.

ಭಾರತ, ಬ್ರೆಜಿಲ್ ಮತ್ತು ಅಮೆರಿಕ ದೇಶಗಳು ವಿಶ್ವದ ಪ್ರಮುಖ ಜೈವಿಕ ಇಂಧನ ಉತ್ಪಾದಕರು ಮತ್ತು ಗ್ರಾಹಕರು, ಇತರ ಆಸಕ್ತ ದೇಶಗಳೊಂದಿಗೆ ಜಾಗತಿಕ ಜೈವಿಕ ಇಂಧನ ಒಕ್ಕೂಟದ ಅಭಿವೃದ್ಧಿಗೆ ಮುಂದಿನ ಕೆಲವು ತಿಂಗಳುಗಳಲ್ಲಿ ಒಟ್ಟಾಗಿ ಕೆಲಸ ಮಾಡಲಿವೆ ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ. ಪ್ರಸ್ತುತ ಭಾರತದ ಜಿ20 ಅಧ್ಯಕ್ಷತೆಯಡಿಯಲ್ಲಿ ಜೈವಿಕ ಇಂಧನವೂ ಕೂಡ ಆದ್ಯತೆಯ ವಿಷಯಗಳಲ್ಲೊಂದಾಗಿದೆ.

ಜೈವಿಕ ಇಂಧನ ಕ್ಷೇತ್ರದಲ್ಲಿ ಸಹಕಾರ ಹೆಚ್ಚಿಸುವುದು ಹಾಗೆಯೇ ಸಾರಿಗೆ ಉದ್ಯಮಗಳಲ್ಲಿ ಜೈವಿಕ ಇಂಧನ ಬಳಕೆಯನ್ನು ಉತ್ತೇಜಿಸುವುದು ಈ ಒಕ್ಕೂಟದ ಮೂಲ ಉದ್ದೇಶವಾಗಿದೆ. ಇದರೊಟ್ಟಿಗೆ ಜೈವಿಕ ಇಂಧನ ಮಾರುಕಟ್ಟೆಗಳನ್ನು ಬಲಪಡಿಸುವುದರ ಜೊತೆಗೆ ಜಾಗತಿಕ ಜೈವಿಕ ಇಂಧನ ವ್ಯಾಪಾರವನ್ನು ಸುಗಮಗೊಳಿಸುವುದು, ವಿಶ್ವಾದ್ಯಂತ ರಾಷ್ಟ್ರೀಯ ಜೈವಿಕ ಇಂಧನ ಕಾರ್ಯಕ್ರಮಗಳಿಗೆ ತಾಂತ್ರಿಕ ಬೆಂಬಲವನ್ನು ಒದಗಿಸುವುದೂ ಕೂಡ ಈ ಒಕ್ಕೂಟದ ಉದ್ದೇಶಗಳಾಗಿವೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!