SHOCKING VIDEO| ಮಹಿಳೆಯರೇ ಹುಷಾರು: ರಸ್ತೆ ಮೇಲೆ ನಡೆಯುವಾಗ ಇರಲಿ ಎಚ್ಚರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಿಳೆಯರು ಮನೆಯಿಂದ ಹೊರಗೆ ಬಂದರೆ ಹೆಚ್ಚು ಜಾಗೃತರಾಗಬೇಕು. ಯಾವಾಗ ಎಲ್ಲಿ ಯಾವ ಅಪಾಯ ಬರುತ್ತದೆಯೋ ಗೊತ್ತಿಲ್ಲ. ನಿರ್ಲಕ್ಷ್ಯ ವಹಿಸಿದರೆ ಅನಿರೀಕ್ಷಿತವಾಗಿ ಏನಾದರೂ ಸಂಭವಿಸುತ್ತದೆ. ಆದ್ದರಿಂದ, ತುಂಬಾ ಜಾಗರೂಕರಾಗಿರಿ.

ಬೈಕ್ ನಲ್ಲಿ ಬರುತ್ತಿದ್ದ ಕಳ್ಳರು ಈಗ ಕಾರುಗಳಲ್ಲೂ ಬಂದು ಚೈನ್ ಸ್ನ್ಯಾಚಿಂಗ್ ಮಾಡುತ್ತಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕಾರಿನಲ್ಲಿ ಬಂದ ಕಳ್ಳರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಸರ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಸರ ಎಳೆಯುತ್ತಿದ್ದಾಗ ಮಹಿಳೆ ಜಾರಿ ಕೆಳಗೆ ಬಿದ್ದಿದ್ದಾರೆ, ಸ್ವಲ್ಪ ದೂರ ಮಹಿಳೆಯನ್ನು ಎಳೆದೊಯ್ದರೂ ಆಕೆ ತನ್ನ ಸರವನ್ನು ಉಳಿಸಿಕೊಂಡಿದ್ದಾರೆ.

ಸರಗಳ್ಳರು ಆಕೆಯನ್ನು ಬಿಟ್ಟು ಕಾರಿನಲ್ಲಿ ಪರಾರಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!