ಮೇರೆ ಸಾಯಿ ಧಾರಾವಾಹಿ ಖ್ಯಾತಿಯ ನಟಿ ಅನಯಾ ಸೋನಿ ಕಿಡ್ನಿ ವೈಫಲ್ಯ: ಆರೋಗ್ಯ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೇರೆ ಸಾಯಿ ಧಾರಾವಾಹಿ ಖ್ಯಾತಿಯ ನಟಿ ಅನಯಾ ಸೋನಿ ಕಿಡ್ನಿ ವೈಫಲ್ಯ ಆಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ನಟಿ ಅನಯಾ ಸೋನಿ ತಮ್ಮ ಅನಾರೋಗ್ಯ ಸ್ಥಿತಿಯನ್ನು ಇನ್​ಸ್ಟಾಗ್ರಾಮ್​ನಲ್ಲಿ ಸುದೀರ್ಘ ಬರಹದೊಂದಿಗೆ ಹಂಚಿಕೊಂಡಿದ್ದಾರೆ. ‘ನನ್ನ ಕಿಡ್ನಿ ವೈಫಲ್ಯವಾಗಿದೆ, ಡಯಾಲಿಸಿಸ್ ಮಾಡಬೇಕಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ನನ್ನ ಕ್ರಿಯೇಟಿನೈನ್ ಪ್ರಮಾಣ 15.76, ಹಿಮೋಗ್ಲೋಬಿನ್ ಪ್ರಮಾಣ 15.76 ಇದ್ದು, ಸ್ಥಿತಿ ಗಂಭೀರವಾಗಿದೆ. ನಾನು ಸೋಮವಾರದಂದು ಅಂಧೇರಿಯ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ನನಗಾಗಿ ಪ್ರಾರ್ಥನೆ ಮಾಡಿ. ನನ್ನ ಜೀವನದ ಪ್ರಯಾಣ ಸುಲಭವಿಲ್ಲ. ಆದರೆ ಪ್ರಸ್ತುತ ಕ್ಷಣವನ್ನು ಆನಂದಿಸುವ ಮೂಲಕ ಅದನ್ನು ಸುಲಭವಾಗಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಈ ಸಮಯ ಬರುತ್ತದೆ ಎಂದು ನನಗೆ ತಿಳಿದಿತ್ತು. ಆದರೆ ಇದು ಕೂಡ ಹಾದುಹೋಗುತ್ತದೆ. ಶೀಘ್ರದಲ್ಲೇ ನನ್ನ ಕಿಡ್ನಿ ಟ್ರಾನ್ಸ್‌ಪ್ಲಾಂಟ್‌ ಮಾಡಿಸುತ್ತೇನೆ. ಬಳಿಕ ಡಯಾಲಿಸಿಸ್‌ಗೆ ಒಳಗಾಗುತ್ತೇನೆ ಎಂದಿದ್ದಾರೆ.

ಈ ಸುದ್ದಿ ಹೊರ ಬೀಳುತ್ತಿದ್ದಂತೆ ಅಭಿಮಾನಿಗಳು ಚಿಂತೆಗೊಳಗಾಗಿದ್ದಾರೆ. ನೀವು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ.
ಈ ಹಿಂದೆ 2021ರಲ್ಲಿ, ಅನಯಾ ಸೋನಿ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಕಿಡ್ನಿ ಸಮಸ್ಯೆ ಸಂಬಂಧ ಕೆಲ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಜೊತೆಗೆ ಚಿಕಿತ್ಸೆಗೆ ಹಣಕಾಸಿನ ಸಹಾಯ ಕೋರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!