ಮತ್ತೆ ಸಾವಿರ ಉದ್ಯೋಗಿಗಳನ್ನು ಹೊರಹಾಕಲು ಮೆಟಾ ಚಿಂತನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜನಪ್ರಿಯ ಸೋಷಿಯಲ್‌ ಮೀಡಿಯಾ ಫೆಸ್ಬುಕ್‌, ಇನ್ಸ್ಟಾಗ್ರಾಂ ಗಳ ಮಾತೃಸಂಸ್ಥೆ ಮೆಟಾ ಇಂಕ್‌, ಇದೀಗ ಮತ್ತೊಮ್ಮೆ 1,000 ಉದ್ಯೋಗಿಗಳನ್ನು ಹೊರಹಾಕಲು ಚಿಂತಿಸಿದೆ. ಕಳೆದ ನವೆಂಬರ್‌ ತಿಂಗಳಲ್ಲಿ ಆರ್ಥಿಕ ಕಾರಣಗಳಿಂದ ಬರೋಬ್ಬರಿ 11 ಸಾವಿರ ಮಂದಿಯನ್ನು ಮೆಟಾ ಹೊರಹಾಕಿತ್ತು. ಈ ವಾರ ಮತ್ತೊಮ್ಮೆ ತಾಜಾ ಸುತ್ತಿನ ವಜಾಗೊಳಿಸುವಿಕೆಯನ್ನು ಮೆಟಾ ಯೋಜಿಸುತ್ತಿದೆ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ.

ವಿಶ್ವದ ಅತಿದೊಡ್ಡ ಸಾಮಾಜಿಕ ನೆಟ್‌ವರ್ಕಿಂಗ್ ಕಂಪನಿ ಎಂದೆನಿಸಿರುವ ಮೆಟಾ ಇಂಕ್‌ ಈ ಹಿಂದೆ 2022ರ ನವೆಂಬರ್‌ ತಿಂಗಳಿನಲ್ಲಿ ಕಂಪನಿಯಲ್ಲಿ ಆಂತರಿಕ ದಕ್ಷತೆಯ ಕಾರಣ ನೀಡಿ 13 ಶೇಕಡಾದಷ್ಟು ಉದ್ಯೋಗಿಗಳನ್ನು ಹೊರಹಾಕುವುದಾಗಿ ಹೇಳಿತ್ತು. ಪರಿಣಾಮ 11,000 ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಇದೀಗ ಮತ್ತೊಮ್ಮೆ ತನ್ನ ತಂಡಗಳನ್ನು ಮೆಟಾ ಹೊಂದಾಣಿಕೆ ಮಾಡುತ್ತಿದ್ದು ತೀರಾ ಅಗತ್ಯವಲ್ಲದ ತಂಡಗಳನ್ನು ಮುಲಾಜಿಲ್ಲದೇ ಕಿತ್ತೊಗೆಯಲಿದೆ. ಇದರಿಂದ ಸಾವಿರದಷ್ಟು ಜನರು ಪಿಂಕ್‌ ಸ್ಲಿಪ್‌ ಪಡೆಯಲಿದ್ದಾರೆ ಎನ್ನಲಾಗಿದೆ. ಈ ಸುತ್ತಿನ ಕಡಿತವು ಹಣಕಾಸಿನ ಗುರಿಗಳಿಂದ ನಿರ್ಧರಿಸಲ್ಪಡುತ್ತದೆ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!