ಕಾಫಿಯೊಂದಿಗೆ ಗರಿಗರಿಯಾದ ಮೆಂತ್ಯೆಸೊಪ್ಪಿನ ರವಾ ಚಿಪ್ಸ್..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಂಜೆ ಕಾಫಿ, ಟೀ ಜೊತೆಗೆ ಚಿಪ್ಸ್‌ ಸೇವಿಸುವುದು ಕೆಲವರಿಗೆ ರೂಢಿ. ಹಾಗಾಗಿ ಬೇಕರಿ, ಹಾಟ್‌ ಚಿಪ್ಸ್‌ ಸೆಂಟರ್‌ಗಳ ಮೊರೆ ಹೋಗುವುದು ಕೂಡಾ ಖಾಯಂ ಆಗಿರುತ್ತದೆ. ಬಿಡುವಿನ ಸಮಯದಲ್ಲಿ ಮನೆಯಲ್ಲಿ ಮೆಂತ್ಯಸೊಪ್ಪಿನ ರವಾ ಚಿಪ್ಸ್‌ ಮಾಡಿದ್ರೆ ಆರೋಗ್ಯಕ್ಕೂ ಒಳ್ಳೆಯದು, ರುಚಿಯಾಗಿ ಕೂಡ ಇರುತ್ತದೆ. ಹಾಗಾದ್ರೆ ಗರಿಗರಿಯಾಗಿ ಮೆಂತ್ಯೆ ಚಿಪ್ಸ್‌ ಟ್ರೈ ಮಾಡಿ.

ಪದಾರ್ಥಗಳು

1 ಗೊಂಚಲು ಮೆಂತ್ಯ ಸೊಪ್ಪು (ನುಣ್ಣಗೆ ಕತ್ತರಿಸಿ)
2 ಕಪ್ ಮೈದಾ
1/4 ಕಪ್ ರವೆ / ಸೆಮೊಲೀನಾ (ಒರಟಾದ)
1 ಟೀಸ್ಪೂನ್ ಜೀರಿಗೆ
1/2 ಟೀಸ್ಪೂನ್ ಕಾಳು ಮೆಣಸು (ಪುಡಿಮಾಡಿ)
1 ಟೀಸ್ಪೂನ್ ಮೆಣಸಿನ ಪುಡಿ
3/4 ಟೀಸ್ಪೂನ್ ಉಪ್ಪು
2 ಟೇಬಲ್ಸ್ಪೂನ್ ಬಿಸಿ ತುಪ್ಪ
ನೀರು (ಬೆರೆಸಲು)
ಎಣ್ಣೆ (ಹುರಿಯಲು)

ಮಾಡುವ ವಿಧಾನ

ದೊಡ್ಡ ಬಟ್ಟಲಿನಲ್ಲಿ 2 ಕಪ್ ಮೈದಾ ಮತ್ತು 1/4 ಕಪ್ ರವೆ, 1 ಟೀಸ್ಪೂನ್ ಜೀರಿಗೆ, 1/2 ಟೀಸ್ಪೂನ್ ಕಾಳು ಮೆಣಸು, 1 ಟೀಸ್ಪೂನ್ ಮೆಣಸಿನ ಪುಡಿ, 3/4 ಟೀಸ್ಪೂನ್ ಉಪ್ಪು ಎಲ್ಲವನ್ನು ಹಾಕಿ ಮಿಶ್ರಣ ಮಾಡಿ. ಬಳಿಕ 2 ಟೇಬಲ್ಸ್ಪೂನ್ ಬಿಸಿ ತುಪ್ಪವನ್ನು ಹಾಕಿ ಮತ್ತೊಮ್ಮೆ ಮಿಶ್ರಣ ಮಾಡಿ. ಅದಕ್ಕೆ ನುಣ್ಣಗೆ ಕತ್ತರಿಸಿದ ಮೆಂತ್ಯ ಸೊಪ್ಪು ಸೇರಿಸಿ ಕಲಸಿ. ಅಗತ್ಯವಿರುವಂತೆ ನೀರನ್ನು ಸೇರಿಸುತ್ತಾ ನಯವಾದ ಹಿಟ್ಟನ್ನು ರೆಡಿಮಾಡಿ.

ನಂತರ ಒಂದು ಬಾಲ್‌ ಸೈಜ್‌ನಲ್ಲಿ ಹಿಟ್ಟನ್ನು ತೆಗೆದುಕೊಂಡು ಮೈದಾ ಸಿಂಪಡಿಸಿ ಚಪಾತಿ ಲಟ್ಟಿಸಿದ ಹಾಗೆ ಅಗಲವಾಗಿ, ದಪ್ಪವಾಗಿ ಲಟ್ಟಿಸಿ. ಕಟರ್‌ ಅಥವಾ ಹರಿತವಾದ ಚಾಕುವಿನಿಂದ ಅದನ್ನು ವಜ್ರದ ಆಕಾರದಲ್ಲಿ(ಆಯ್ಕೆ) ಕತ್ತರಿಸಿ ಕಾದಿರುವ ಎಣ್ಣೆಗೆ ಹಾಕಿ ಕರಿಯಿರಿ. ಹೊಂಬಣ್ಣಕ್ಕೆ ತಿರುಗಿದ ಬಳಿಕ ಹೊರತೆಗೆದರೆ ಮೆಂತ್ಯೆಸೊಪ್ಪಿನ ಚಿಪ್ಸ್‌ ರೆಡಿ. ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿ, ನಿಮಿಗಿಷ್ಟವಾದ ಸಾಸ್‌ನೊಂದಿಗೆ ಸವಿಯಿರಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!