Monday, July 4, 2022

Latest Posts

ವಿಧಾನ ಪರಿಷತ್: ಸವದಿ ಸಹಿತ 7 ಅಭ್ಯರ್ಥಿಗಳ ಅವಿರೋಧ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಧಾನ ಪರಿಷತ್​ನ 7 ಸ್ಥಾನಗಳಿಗೆ ಅವಿರೋಧ ರೂಪದಲ್ಲೇ ಆಯ್ಕೆ ನಡೆದಿದೆ.
ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್​ನ 7 ಸ್ಥಾನಗಳಿಗೆ ಜೂನ್​ 6ರಂದು ಮತದಾನ ನಡೆಯಬೇಕಿತ್ತು.ಆದರೆ, ವಿಧಾನಸಭೆ ಹಾಗೂ ಪಕ್ಷವಾರು ಬಲಾಬಲ ಆಧಾರದಲ್ಲಿ ಅಭ್ಯರ್ಥಿಗಳು ಕಣದಲ್ಲಿದ್ದರು. ಮೂರು ಪಕ್ಷ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಹೀಗಾಗಿ 7 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ರಾಜ್ಯ ವಿಧಾನಸಭೆಯ ಕಾರ್ಯದರ್ಶಿಯೂ ಆದ ವಿಶಾಲಾಕ್ಷಿ ಘೋಷಿಸಿದರು.
ಮೇ 24ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು, ಮೇ 25ರಂದು ಪರಿಶೀಲನೆ ಹಾಗೂ ಮೇ 27 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿತ್ತು.
ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಸವದಿ ಲಕ್ಷ್ಮಣ, ಟಿ.ನಾರಾಯಣಸ್ವಾಮಿ, ಹೇಮಲತಾ ನಾಯಕ ಹಾಗೂ ಎಸ್​.ಕೇಶವ ಪ್ರಸಾದ,ಕಾಂಗ್ರೆಸ್​ನಿಂದ ಕೆ.ಅಬ್ದುಲ್​ ಜಬ್ಬಾರ್​ ಹಾಗೂ ಎಂ​.ನಾಗರಾಜು. ಜೆಡಿಎಸ್​ನಿಂದ ಶರವಣ ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss