ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ಉಪಕರಣ ಅಳವಡಿಕೆ ತಪಾಸಣೆಗಾಗಿ ಹಣಕಾಸು ವಿಭಾಗದ ನಿರ್ದೇಶಕರೊಬ್ಬರು ತಂತ್ರಜ್ಞರನ್ನು ಕರೆದುಕೊಂಡು ಪ್ರವಾಸ ಹೋಗಬೇಕಾಗಿತ್ತು. ಆದರೆ ನಿರ್ದೇಶಕರು ತಮ್ಮ ಪತ್ನಿಯನ್ನು ಕರೆದುಕೊಂಡು ವಿದೇಶ ಸುತ್ತಿ ಬಂದಿದ್ದಾರೆ ಎಂದು ಬಿಎಂಆರ್‌ಸಿಎಲ್ ನೌಕರರ ಸಂಘ ಆರೋಪಿಸಿದೆ.
ಮೆಟ್ರೋ ನಿಲ್ದಾಣಗಳಲ್ಲಿ ಟೆಲಿಕಮ್ಯೂನಿಕೇಶನ್ ಪರಿಕರಗಳ ಅಳವಡಿಕೆ ಸಂಬಂಧ ಉಪಗುತ್ತಿಗೆ ಪಡೆದಿದ್ದ ಜರ್ಮನಿಯ ಎಎಸ್‌ಎಲ್ ಕಂಪನಿಯು ಎಫ್‌ಎಟಿ (ಫ್ಯಾಕ್ಟರಿ ಎಕ್ಸೆಪ್ಟೆನ್ಸ್ ಟೆಸ್ಟ್ ) ತಪಾಸಣೆಗಾಗಿ ಬಿಎಂಆರ್‌ಸಿಎಲ್‌ನ್ನು ಆಹ್ವಾನಿಸಿತ್ತು. ಆದರೆ, ತಾಂತ್ರಿಕ ಪರಿಣತರ ಬದಲಾಗಿ ಆರ್ಥಿಕ ವಿಭಾಗದ ನಿರ್ದೇಶಕರು ತಮ್ಮ ಪತ್ನಿಯನ್ನು ಕರೆದುಕೊಂಡು ಜರ್ಮನಿಗೆ ಹೋಗಿ ಬಂದಿದ್ದಾರೆ. 2022ರ ಸೆಪ್ಟೆಂಬರ್‌ನಲ್ಲಿ ಈ ಘಟನೆ ನಡೆದಿದೆ.
ಇಲ್ಲಿ ದುಂದುವೆಚ್ಚಾಗಿದ್ದು ತನಿಖೆ ನಡೆಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ನೌಕರರ ಸಂಘ ಪತ್ರ ಬರೆದು ದೂರು ನೀಡಿದೆ.