ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಿಜಯ್ ವರ್ಮಾ ಹಾಗೂ ತಮನ್ನಾ ಭಾಟಿಯಾ ನಡುವೆ ಬ್ರೇಕಪ್ ಆಗಿದೆ. ಸದಾ ಎಲ್ಲೆಡೆ ಒಂದಾಗಿ ಕಾಣಿಸಿಕೊಳ್ಳುತ್ತಿದ್ದ ಜೋಡಿ ನಿನ್ನೆ ನಾವಿಬ್ಬರೂ ಫ್ರೆಂಡ್ಸ್ ಅಷ್ಟೇ ಎಂದು ಹೇಳಿಕೊಂಡಿದ್ದಾರೆ.
ಇದೀಗ ಇವರ ಬ್ರೇಕಪ್‌ಗೆ ಕಾರಣ ರಿವೀಲ್ ಆಗಿದೆ. ನಟ ವಿಜಯ್‌ಗೆ ಮದುವೆ ಬಗ್ಗೆ ಈಗಲೇ ಆಸಕ್ತಿ ಇಲ್ಲವಂತೆ. ಆದರೆ ತಮನ್ನಾಗೆ ಮದುವೆಯಾಗಿ ಸೆಟಲ್ ಆಗುವ ಬಯಕೆ ಇದೆ, ವಯಸ್ಸು 35 ಆಗಿದೆ ಈಗ ಮದುವೆ ಆಗಿ ಸೆಟಲ್ ಆಗಬೇಕು ಎಂದು ತಮನ್ನಾ ವಿಜಯ್‌ಗೆ ಯಾವಾಗಲೂ ಹೇಳುತ್ತಿದ್ದರಂತೆ. ಇದು ವಿಜಯ್‌ಗೆ ಇಷ್ಟ ಆಗಿರಲಿಲ್ಲ. ಈ ಕಾರಣದಿಂದ ಇಬ್ಬರ ನಡುವೆ ಸದಾ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ.
ಮದುವೆಯ ವಿಚಾರಕ್ಕೆ ಜೋಡಿ ಮಧ್ಯೆ ಬಿರುಕು ಬಿಟ್ಟಿದ್ದು, ಈ ಬಗ್ಗೆ ಅವರಿಬ್ಬರಿಂದ ಯಾವುದೇ ಸ್ಪಷ್ಟನೆ ಹೊರಬಿದ್ದಿಲ್ಲ.