ಇಂದು ಕೂಡ ಮೆಟ್ರೋ ರೈಲು ಸಂಚಾರ: ಎಂದಿನಂತಿದೆ ಸಾರ್ವಜನಿಕ ಸಾರಿಗೆ ಸೇವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಿನ್ನೆ ರಾಜ್ಯ ಸರ್ಕಾರ ವೀಕೆಂಡ್‌ ಕರ್ಫ್ಯೂ ನಿಯಮ ವಾಪಾಸ್‌ ಪಡೆದ ಬೆನ್ನಲ್ಲೇ ಸಿಲಿಕಾನ್‌ ಸಿಟಿಯಲ್ಲಿ ಸಾರ್ವಜನಿಕ ಸಾರಿಗೆ ಸೇವೆ ಯಥಾಸ್ಥಿತಿಗೆ ಮರಳಿದೆ.
ಇನ್ಮುಂದೆ ವಾರಾಂತ್ಯದಲ್ಲೂ ಮೆಟ್ರೋ, ಬಸ್‌ ಸಂಚಾರ ಯತಾಸ್ಥಿತಿಯಲ್ಲಿ ಇರಲಿದೆ. ಇಂದು, ನಾಳೆಯೂ ಮೆಟ್ರೋ ರೈಲು ಸಂಚಾರ ನಡೆಸುತ್ತಿದ್ದು, ರಾತ್ರಿ 11:30ರವರೆಗೆ ಕಾರ್ಯಾಚರಣೆಯಲ್ಲಿರಲಿದೆ.
ಇಂದು ರಾತ್ರಿ 11 ಗಂಟೆಗೆ ಕೊನೆಯ ರೈಲು ಸಂಚರಿಸಲಿದ್ದು, 11 30ಕ್ಕೆ ಮೆಜೆಸ್ಟಿಕ್‌ ನಲ್ಲಿ ಕೊನೆಗೊಳ್ಳಲಿದೆ. ಭಾನುವಾರ ಬೆಳಗ್ಗೆ 7 ಗಂಟೆಗೆ ಮೆಟ್ರೋ ಸಂಚಾರ ಪ್ರಾರಂಭವಾಗಲಿದೆ ಎಂದು ಬಿಎಂಆರ್‌ ಸಿಎ ತಿಳಿಸಿದೆ.
ವಾರಾಂತ್ಯದಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ 8 ನಿಮಿಷಕ್ಕೊಂದು ಟ್ರೈನ್‌ ಸಂಚರಿಸಲಿದೆ. ಇನ್ನು ಮೆಜೆಸ್ಟಿಕ್, ಸಾಟಿಲೈಟ್‌ ನಿಂದ ಪ್ರಯಾಣಿಕರ ದಟ್ಟಣೆಗೆ ಅನುಸರಿಸಿ ಬಸ್‌ ಗಳು ಸಂಚಾರ ನಡೆಸಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!