Friday, September 29, 2023

Latest Posts

ಯೆಮೆನ್ ಜೈಲಿನ ಮೇಲೆ ಹೌತಿ ಬಂಡುಕೋರರ ದಾಳಿ: 70 ಕೈದಿಗಳ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಯೆಮೆನ್‌ ಜೈಲಿನ ಮೇಲೆ ಡ್ರೋನ್ ದಾಳಿ ನಡೆದಿದ್ದು, 70ಕ್ಕೂ ಹೆಚ್ಚು ಕೈದಿಗಳು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
ಹೌತಿ ಬಂಡುಕೋರರು ಈ ದಾಳಿ ನಡೆಸಿದ್ದು, 70ಕ್ಕೂ ಹೆಚ್ಚು ಕೈದಿಗಳು ಮೃತಪಟ್ಟಿದ್ದು, 138ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಜೈಲಿನ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಯೆಮೆನ್‌ ರೆಡ್‌ ಕ್ರಾಸ್‌ ಸಮಿತಿಯ ಅಧಿಕಾರಿ ಬಶೀರ್‌ ಒಮರ್, ಯೆಮೆನ್‌ ನ ಸಾದಾ ಜೈಲಿನ ಮೇಲೆ ಹೌತಿ ಬಂದುಕೋರರು ದಾಳಿ ನಡೆಸಿದ್ದು, ಕಟ್ಟಡ ಸಂಪೂರ್ಣ ನೆಲಕ್ಕಚ್ಚಿದೆ. ಅವಶೇಷಗಳ ಅಡಿ ಸಿಲುಕಿರುವವರ ರಕ್ಷಣೆಗಾಗಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!