ಹೊಸದಿಗಂತ ವರದಿ, ಕಲಬುರಗಿ:
ಫೆ, 5ರಂದು ನಡೆಯಬೇಕಿದ್ದ ಕಲಬುರಗಿ ಮಹಾ ನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಮುಂದುಡಿಸಿ ಕಲಬುರಗಿ ನ್ಯಾಯಪೀಠ ಆದೇಶ ಹೊರಡಿಸಿದೆ.
ಹಳೆಯ ಮತದಾರ ಪಟ್ಟಿ ಹಾಗೂ ಈ ಹಿಂದೆ ಘೋಷಿಸಿದ ಮೀಸಲಾತಿಯಂತೆ ಚುನಾವಣೆ ನಡೆಸಲು ಸೂಚಿಸಿದೆ.
ಹೊಸದಾಗಿ ಸೇರ್ಪಡೆಯಾದ ಐವರು ವಿಧಾನಪರಿಷತ್ ಸದಸ್ಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಸೂಚನೆ ಕೊಟ್ಟಿದೆ.
ಈ ಹಿಂದೆ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪ ಮೇಯರ್ ಸ್ಥಾನಕ್ಕೆ ಒಬಿಸಿಗೆ ನಿಗಧಿಯಾಗಿತ್ತು.ಅದರಂತೆಯೇ ಚುನಾವಣೆ ನಡೆಸಲು ಶುಕ್ರವಾರ ಸಂಜೆ ಆದೇಶ ಹೊರಡಿಸಿದೆ.