ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರದಲ್ಲಿ ನಾವು ತಿನ್ನಬೇಕೆ?: ಸಚಿವ ನಾರಾಯಣಗೌಡ ಗರಂ

ಹೊಸದಿಗಂತ ವರದಿ, ಮಂಡ್ಯ :

ಅಂಗನವಾಡಿಗಳಿಗೆ ಸರಬರಾಜಾಗುವ ಆಹಾರ ಕಳಪೆ ಗುಣಮಟ್ಟ ಹಾಗೂ ತೂಕದಲ್ಲೂ ವ್ಯತ್ಯಾಸವಿರುತ್ತದೆ. ಸಂಬಂಧಿಸಿದ ಗುತ್ತಿಗೆದಾರರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವ ನಾರಾಯಣಗೌಡ ಒತ್ತಾಯಿಸಿದರು.
ಜಿ.ಪಂ. ಕಾವೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರದಲ್ಲಿ ನಾವು ತಿನ್ನಬೇಕೆ? ಇಂತಹ ದುರ್ಗತಿ ನಮಗೆ ಬೇದಿದೆಯೇ ಎಂದು ಪ್ರಶ್ನಸಿದರು.
ಜಿಲ್ಲಾಧಿಕಾರಿ ಸೇರಿದಂತೆ ಇಲಾಖೆ ಆಯುಕ್ತರು, ಕಾರ‌್ಯದರ್ಶಿಗಳು ತಾಲೂಕು, ಜಿಲ್ಲೆಗಳಿಗೆ ಆಗಾಗ್ಗೆ ಭೇಟಿ ನೀಡಿ ತಪಾಸಣೆ ನಡೆಸಬೇಕು. ಇಲ್ಲದಿದ್ದಲ್ಲಿ ಯಾರೋ ಗುತ್ತಿಗೆದಾರ ಯಾವ ಆಹಾರ ಪದಾರ್ಥಗಳನ್ನು ಕೊಡುತ್ತಾನೋ ಅವುಗಳನ್ನು ವಿತರಿಸುವ ಕೆಲಸ ನಡೆಯುತ್ತದೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಜನ ಎಲ್ಲಿಯವರೆಗೆ ಬುದ್ಧಿವಂತರಾಗುವುದಿಲ್ಲವೋ, ಈ ಬಗ್ಗೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯವರೆವಿಗೂ ಈ ವ್ಯವಸ್ಥೆ ಸರಿಯಾಗದು ಎಂದು ಹೇಳಿ ವೌನಕ್ಕೆ ಶರಣಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!