500ಕೆಜಿ ಹಿಟ್ಟು…4.5ಕಿಮೀ ಲೆಂತು…ಗಿನ್ನೀಸ್‌ ರೆಕಾರ್ಡ್ ಸೇರಿತು ಬ್ರೆಡ್ಡು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ವಿಶ್ವದಲ್ಲೇ ಅತಿ ಉದ್ದದ ಬ್ರೆಡ್ ತಯಾರಿಸುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದಾರೆ. ಆ 14,360 ಬ್ರೆಡ್ ತುಂಡುಗಳ ಒಟ್ಟು ಉದ್ದ 4.5 ಕಿಲೋಮೀಟರ್. ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದ ಯೂನಿವರ್ಸಿಡಾಡ್ ವಿಜಾಡಾ ಮೆಕ್ಸಾಕಲಿಯ ವಿದ್ಯಾರ್ಥಿಗಳು ಈ ದಾಖಲೆ ನಿರ್ಮಿಸಿದ್ದಾರೆ.

ಜನವರಿ 6 ರಂದು ಆಚರಿಸಲಾಗುವ ‘ತ್ರೀ ಕಿಂಗ್ಸ್ ಡೇ’ ಸಂದರ್ಭದಲ್ಲಿ ವಿದ್ಯಾರ್ಥಿಗಳು ಈ ಸಾಂಪ್ರದಾಯಿಕ ರೋಸ್ಕಾ ಡಿ ರೆಯೆಸ್ ಬ್ರೆಡ್ ಅನ್ನು ತಯಾರಿಸಿದರು. ಇದಕ್ಕೆ ಸಂಬಂಧಿಸಿದ ವಿವರಗಳು ಮತ್ತು ಫೋಟೋಗಳನ್ನು Universidad Viziada Mexacali ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬ್ರೆಡ್ ತಯಾರಿಸಲು 700 ವಿದ್ಯಾರ್ಥಿಗಳು 96 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ.

ಇದಕ್ಕಾಗಿ 500 ಕೆಜಿ ಹಿಟ್ಟು, 26,000 ಕೋಳಿ ಮೊಟ್ಟೆ, 2,000 ಲೀಟರ್ ಹಾಲು ಮತ್ತು ಇತರ ವಸ್ತುಗಳನ್ನು ಬಳಸಲಾಗಿದೆ. ಆಹಾರ ವಿಭಾಗದಲ್ಲಿ ಮೆಕ್ಸಿಕೋ ಈಗಾಗಲೇ ಹಲವು ದಾಖಲೆಗಳನ್ನು ಮುರಿದಿದೆ. ಈಗ ಆ ಪಟ್ಟಿಗೆ ಈ ಬ್ರೆಡ್‌ ಕೂಡಾ ಸೇರಿಕೊಂಡಿದೆ. ಮೆಕ್ಸಿಕೋದ ವಿದ್ಯಾರ್ಥಿಗಳಲ್ಲದೆ, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಸಹ ಗಿನ್ನಿಸ್ ದಾಖಲೆಗಾಗಿ ಶ್ರಮಿಸುತ್ತಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!