Food Recipe | ರುಚಿ ರುಚಿಯಾದ ದಿಢೀರ್‌ ಮೆಂತೆ ಬಾತ್‌ ಮಾಡುವುದು ಹೇಗೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬೆಳಿಗ್ಗೆ ಎದ್ದ ತಕ್ಷಣ ಏನಪ್ಪಾ ಇವತ್ತು ತಿಂಡಿ ಮಾಡೋದು ಅಂತ ಯೋಚಿಸ್ತಿದೀರಾ ಹಾಗಾದ್ರೆ ರುಚಿ ರುಚಿಯಾದ ದಿಢೀರ್‌ ಮೆಂತೆ ಬಾತ್‌ ಅನ್ನು ಒಮ್ಮೆ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು :
ಮೆಂತೆ ಸೊಪ್ಪು
ಗ್ಲಾಸ್‌ ಅಕ್ಕಿ
ಟೊಮೆಟೊ
ಹಸಿ ಮೆಣಸಿನಕಾಯಿ
ಚಕ್ಕೆ
ಲವಂಗ
ಏಲಕ್ಕಿ
ತುಪ್ಪ
ಈರುಳ್ಳಿ
ಅರಿಶಿಣ ಪುಡಿ
ಬೆಳ್ಳುಳ್ಳಿ
ಶುಂಠಿ
ಪುದೀನಾ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ :
ಮೊಲು ಮೆಂತೆ ಸೊಪ್ಪು ಬಿಡಿಸಿ ತೊಳೆದಿಡಿ. ನಂತರ ಈರುಳ್ಳಿ, ಟೊಮೆಟೊ ಕತ್ತರಿಸಿಡಿ.
ಈಗ ಶುಂಠಿ, ಕೊತ್ತಂಬರಿ ಸೊಪ್ಪು, ಪುದೀನಾ, ಹಸಿ ಮೆಣಸು ಪೇಸ್ಟ್‌ ಮಾಡಿ.

ಕುಕ್ಕರ್‌ ಬಿಸಿ ಮಾಡಿ ಅದಕ್ಕೆ 2 ಚಮಚ ತುಪ್ಪ ಹಾಕಿ ನಂತರ ಚಕ್ಕೆ, ಲವಂಗ, ಏಲಕ್ಕಿ ಹಾಕಿ ನಂತರ ಈರುಳ್ಳಿ ಹಾಕಿ 1 ನಿಮಿಷ ಸೌಟ್‌ನಿಂದ ಆಡಿಸಿ ನಂತರ ಟೊಮೆಟೊ ಹಾಕಿ. ಟೊಮೆಟೊ ಮೆತ್ತಗಾದ ಮೇಲೆ ಅಕ್ಕಿ ತೊಳೆದು ಹಾಕಿ, ನಂತರ ಮೆಂತೆ ಸೊಪ್ಪು ಸೇರಿಸಿ, ಸ್ವಲ್ಪ ಅರಿಶಿಣ, ರುಚಿಗೆ ತಕ್ಕ ಉಪ್ಪು ಹಾಕಿ. 2 ಲೋಟ ನೀರು ಹಾಕಿ ನಂತರ 2 ಸೀಟಿ ಹೊಡೆಸಿದರೆ ರುಚಿ-ರುಚಿಯಾದ ದಿಢೀರ್‌ ಮೆಂತೆ ಬಾತ್‌ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!