ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಕೇಂದ್ರ ಗೃಹ ಸಚಿವಾಲಯ (MHA)ಝಡ್ ಕೆಟಗರಿ ಭದ್ರತೆಯನ್ನು ನೀಡಿದೆ.
ಬಿಎಸ್‌ವೈಗೆ ಕೆಲ ದುಷ್ಕರ್ಮಿಗಳಿಂದ ಜೀವ ಬೆದರಿಕೆ ಇರುವ ಬಗ್ಗೆ ಕೇಂದ್ರ ಭದ್ರತಾ ರಕ್ಷಣೆಯ ಇಂಟೆಲಿಜೆನ್ಸ್ ಬ್ಯೂರೋ ಎಂಎಚ್‌ಗೆ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಿಎಸ್‌ವೈಗೆ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಭದ್ರತೆ ನೀಡುವಂತೆ ಆದೇಶ ಹೊರಡಿಸಿದೆ. ಕೇಂದ್ರ ಗೃಹ ಸಚಿವಾಲಯ ಆದೇಶದಂತೆ ಸಿಆರ್‌ಪಿಎಫ್ ಸಿಬ್ಬಂದಿ ಶೀಘ್ರದಲ್ಲೇ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ.
ಇದರಲ್ಲಿ 10 ಶಸ್ತ್ರಸಜ್ಜಿತ ಸ್ಟ್ಯಾಟಿಕ್ ಗಾರ್ಡ್‌ಗಳು ಬಿಎಸ್‌ವೈ ನಿವಾಸಕ್ಕೆ ಭದ್ರತೆ ನೀಡುತ್ತಾರೆ. ಆರು ಮಂದಿ ವೈಯಕ್ತಿಕ ಭದ್ರತಾ ಅಧಿಕಾರಿಗಳು 24 ಗಂಟೆ ಕಾವಲಿರುತ್ತಾರೆ. 12 ಸಶಸ್ತ್ರ ಬೆಂಗಾವಲು ಕಮಾಂಡೋಗಳು ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದು, ಇಬ್ಬರು ವೀಕ್ಷಕರನ್ನು ನಿರಂತರ ಕಣ್ಗಾವಲಿಗಾಗಿ ಎರಡು ಶಿಫ್ಟ್‌ಗಳಲ್ಲಿ ಇರಿಸಲಾಗುತ್ತದೆ.