ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಮಾಗ್ರಿ:
ಹೀರೇಕಾಯಿ ಅರ್ಧ ಕೆಜಿ, ಈರುಳ್ಳಿ ಒಂದು ಗಡ್ಡೆ, ತೆಂಗಿನೆಣ್ಣೆ ಎರಡು ಟಿ ಸ್ಫೂನ್, ಹಸಿಮೆಣಸು ನಾಲ್ಕು, ತೆಂಗಿನ ಹಾಲು ಒಂದು ಬಟ್ಟಲು, ಜೀರಿಗೆ ಕಾಲು ಚಮಚ, ಅರಶಿನ ಕಾಲು ಚಮಚ, ಮೆಣಸಿನ ಪುಡಿ ಸ್ವಲ್ಪ, ರುಚಿಗೆ ಬೇಕಾದಷ್ಟು ಉಪ್ಪು, ಕೊತ್ತಂಬರಿ ಪುಡಿ ಒಂದು ಚಮವ.
ಮಾಡುವ ವಿಧಾನ:
ಹೀರೇಕಾಯಿಯನ್ನು ಚೆನ್ನಾಗಿ ತೊಳೆದು ಅದರ ಸಿಪ್ಪೆಯನ್ನು ಕ್ಲೀನ್ ಮಾಡಿಕಟ್ಟುಕೊಳ್ಳಿ. ಸಣ್ಣ ಹೋಳುಗಳನ್ನಾಗಿ ಮಾಡಿ. ಬಾಣಲೆಯಲ್ಲಿ ಎಣ್ಣೆ ಸೇರಿಸಿ ಬಿಸಿಗಿಟ್ಟುಕೊಳ್ಳಿ. ಕತ್ತರಿಸಿದ ಈರುಳ್ಳಿ, ಹಸಿಮೆಣಸಿನ ಕಾಯಿ, ಕರಿಬೇವು ಹಾಗೂ ಸಾಂಬಾರ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಫ್ರೈಮಾಡಿ. ಹೆಚ್ಚಿದ ಹೀರೇಕಾಯಿ ಹೋಳುಗಳನ್ನು ಸೇರಿಸಿ ಹುರಿಯಿರಿ. ತೆಂಗಿನ ಹಾಲು ಸೇರಿಸಿ ಕುದಿಸಿ. ಈ ರೀತಿ ಮಾಡಿದ ಹುಳಿ ಒಂದು ರೀತಿಯ ಟೇಸ್ಟಿಯಾಗಿರುತ್ತದೆ.