IPL 2022 | ಪಂಜಾಬ್‌ ರಾಜರಿಗಿಂದು ರೋಹಿತ್ ಹುಡುಗರ ಸವಾಲು; ಮೊದಲ ಜಯ ಕಾಣುವುದೇ ಮುಂಬೈ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್‌ 2022ರಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿಯೂ ಸೋತು ಅಂಕಪಟ್ಟಿಯಲ್ಲಿ ʼತಳʼ ಕಂಡಿರುವ ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವು ಇಂದು ಮೊದಲ ಗೆಲುವಿನ ತವಕದೊಂದಿಗೆ ಮೈದಾನಕಿಳಿಯಲಿದೆ.
ಪುಣೆ ಕ್ರಿಡಾಂಗಣದಲ್ಲಿ ಬುಧವಾರ ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಪಂಜಾಬ್‌ ಕಿಂಗ್ಸ್‌ ಸವಾಲನ್ನು ಮುಂಬೈ ತಂಡವು ಎದುರಿಸಲಿದೆ. ಆರ್ಸಿಬಿ ವಿರುದ್ಧ ಹಿಂದಿನ ಪಂದ್ಯದಲ್ಲಿ ಕೇವಲ ಇಬ್ಬರು ವಿದೇಶಿ ಆಟಗಾರರೊಂದಿಗೆ ( ಪೊಲಾರ್ಡ್‌, ಡೆವಾಲ್ಡ್‌ ಬ್ರೇವಿಸ್)‌ ಕಣಕ್ಕಿಳಿದು ಮುಂಬೈ ಅಚ್ಚರಿ ಮೂಡಿಸಿತ್ತು. ಹಾಗಿದ್ದರೂ ಈ ಪ್ರಯತ್ನ ಫಲನೀಡದೆ ಆರ್ಸಿಬಿ ವಿರುದ್ಧ ಹೀನಾಯ ಸೋಲು ಕಂಡಿತ್ತು.
ಎಲ್ಲಾ ವಿಭಾಗಗಗಳಲ್ಲಿಯೂ ನೀರಸ ಪ್ರದರ್ಶನ ನೀಡುತ್ತಿರುವ ಮುಂಬೈ ತಂಡದ ಸಂಯೋಜನೆ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ. 2015 ಸೇರಿದಂತೆ ಕೆಲ ಆವೃತ್ತಿಗಳಲ್ಲಿಯೂ ಮುಂಬೈ ಪಂದ್ಯಾವಳಿ ಆರಂಭದಲ್ಲಿ ಇಂತಹದ್ದೇ ಸೋಲುಗಳನ್ನು ಕಂಡು ಬಳಿಕ ಫಿನಿಕ್ಸ್‌ ನಂತೆ ಚೇತರಿಸಿಕೊಂಡು ಟ್ರೋಫಿ ಗೆದ್ದ ಉದಾಹರಣಗಳಿವೆ. ಆದ್ದರಿಂದ ಮುಂಬೈ ಸೋಲಿನ ಸರಪಳಿ ಕೊನೆಗೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಮಯಾಂಕ್‌ ಅಗರ್ವಾಲ್‌ ನೇತೃತ್ವದ ಪಂಜಾಬ್‌ ತಂಡವು ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಕಡೆಯ ಓವರ್‌ ಗಳಲ್ಲಿ ಸೋತಿದೆ. ಆದ್ದರಿಂದ ಅಂತಿಮ ಓವರ್‌ ಗಳಲ್ಲಿ ಒತ್ತಡ ನಿಭಾಯಿಸುವ ಗುರಿಯೊಂದಿಗೆ ತಂಡವು ಕಣಕ್ಕಿಳಿಯಲಿದೆ. ತಂಡವು ಬ್ಯಾಟಿಂಗ್‌ ಬೌಲಿಂಗ್‌ ಎರಡೂ ವಿಭಾಗಗಳಲ್ಲಿಯೂ ಬಲಿಷ್ಠವಾಗಿದ್ದು, ಆಟಗಾರರು ಖ್ಯಾತಿಗೆ ತಕ್ಕ ಪ್ರದರ್ಶನ ನೀಡಿದರೆ ಗೆಲುವು ಸುಲಭವಾಗಲಿದೆ.

ಪಂಜಾಬ್ ಕಿಂಗ್ಸ್‌ ಸಂಭಾವ್ಯ ಇಲವೆನ್ :
ಮಯಾಂಕ್ ಅಗರ್ವಾಲ್ (ಸಿ), ಶಿಖರ್ ಧವನ್, ಜಾನಿ ಬೈರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಓಡಿಯನ್ ಸ್ಮಿತ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್, ವೈಭವ್ ಅರೋರಾ

ಮುಂಬೈ ಇಂಡಿಯನ್ಸ್ ಸಂಭಾವ್ಯ ಇಲವೆನ್ :
ಇಶಾನ್ ಕಿಶನ್ (wk), ರೋಹಿತ್ ಶರ್ಮಾ (c), ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಫ್ಯಾಬಿಯನ್ ಅಲೆನ್, ಮುರುಗನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಬೇಸಿಲ್ ಥಂಪಿ, ಜಯದೇವ್ ಉನದ್ಕತ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!