ಬೀಸ್ಟ್‌ ಸಿನಿಮಾ ನೋಡಿ, ಒಂದು ಲೀಟರ್‌ ಪೆಟ್ರೋಲ್‌ ಪಡೆಯಿರಿ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮಿಳಿನ ಸ್ಟಾರ್ ಹೀರೋ ವಿಜಯ್ ದಳಪತಿ ಹಾಗೂ ಪೂಜಾ ಹೆಗ್ಡೆ ಅಭಿನಯದ ‘ಬೀಸ್ಟ್’ ಸಿನಿಮಾ ಇಂದು ವಿಶ್ವದಾದ್ಯಂತ ತೆರೆಕಂಡಿದೆ. ನೆಲ್ಸನ್ ದಿಲೀಪ್ ನಿರ್ದೇಶನದ ಈ ಚಿತ್ರ ಈಗ ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿದೆ. ತಮಿಳುನಾಡಿನ ಚಿತ್ರಮಂದಿರಗಳಲ್ಲಿ ವಿಜಯ್ ಅಭಿಮಾನಿಗಳು ಸಿನಿಮಾ ನೋಡಲು ಸಾಲುಗಟ್ಟಿ ನಿಂತಿದ್ದರು. ಬೀಸ್ಟ್‌ ಸಿನಿಮಾ ಅಲ್ಲಿನ ಕೆಲ ಚಿತ್ರಮಂದಿರಗಳು ಬಂಪರ್‌ ಕೊಡುಗೆ ನೀಡಿದ್ದಾರೆ.

ಚೆನ್ನೈನ ರಾಜ ಲಕ್ಷ್ಮಿ ಮತ್ತು ಅಮೃತರಾಜ್ ಚಿತ್ರಮಂದಿರಗಳು ಬೀಸ್ಟ್ ಸಿನಿಮಾ ನೋಡುವವರಿಗೆ ಒಂದು ಲೀಟರ್ ಪೆಟ್ರೋಲ್ ಅನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿವೆ. ಆದರೆ, ಷರತ್ತು ಬದ್ಧ ಆಫರ್‌ ಇದಾಗಿದ್ದು, ಫಸ್ಟ್ ಡೇ ಫಸ್ಟ್ ಶೋಗೆ 5 ಟಿಕೆಟ್ ಖರೀದಿಸುವವರಿಗೆ ಮಾತ್ರ ಈ ಆಫರ್ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.

ಈ ಥಿಯೇಟರ್ ಗಳಲ್ಲಿ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ದರ 500. ಈ ದರದಲ್ಲಿ ಕನಿಷ್ಠ ಐದು ಟಿಕೆಟ್ ಖರೀದಿಸುವವರಿಗೆ ಲೀಟರ್ ಪೆಟ್ರೋಲ್ ನೀಡಲಾಗುವುದು ಎಂದು ಘೋಷಿಸಲಾಗಿದೆ. ಆದರೆ, ಸ್ಟಾರ್ ಹೀರೋ ಸಿನಿಮಾವಾದ್ದರಿಂದ ಮೊದಲ ದಿನದ ಮೊದಲ ಶೋನ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದ್ದು, ಹೌಸ್ ಫುಲ್ ಆಗಿತ್ತು. ಹಲವರು ಈ ಕೊಡುಗೆಯ ಲಾಭ ಪಡೆದು ಪೆಟ್ರೋಲ್ ತೆಗೆದುಕೊಂಡರು. ಚೆ

ನ್ನೈನ ಇತರ ಕೆಲವು ಚಿತ್ರಮಂದಿರಗಳಲ್ಲಿ ವಿಜಯ್ ಅಭಿಮಾನಿಗಳಿಗೆ ಪಾರ್ಟಿ ಮಕ್ಕಳ ಇಯ್ಯಕ್ಕಂ ಪರವಾಗಿ ಒಂದು ಲೀಟರ್ ಪೆಟ್ರೋಲ್ ಉಚಿತವಾಗಿ ವಿತರಿಸಿದ್ದಾರೆ. ಪೆಟ್ರೋಲ್‌ ದರ ಏರಿಕೆ ಬಿಸಿಯಲ್ಲಿದ್ದ ಜನರಿಗೆ ಈ ಆಫರ್‌ ನಿಜಕ್ಕೂ ಖುಷಿ ತಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!