ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಮನೆಯಲ ಲವ್ ಬರ್ಡ್ಸ್ ಇಶಾನಿ ಹಾಗೂ ಮೈಕೆಲ್ ಬ್ರೇಕಪ್ ಮಾಡಿಕೊಂಡಿದ್ದಾರೆ.
ದೊಡ್ಮನೆಯಲ್ಲಿ ಲವ್ ಆಗಿ ಮದುವೆ ಆಗಿರುವ ಉದಾಹರಣೆ ಇದೆ, ಹಾಗೆಯೇ ಇಲ್ಲೇ ಪ್ರೀತಿಯಾಗಿ ಇಲ್ಲೇ ಬ್ರೇಕಪ್ ಆದವರೂ ಇದ್ದಾರೆ. ಅದರಲ್ಲಿ ಇಶಾನಿ-ಮೈಕೆಲ್ ಕೂಡ ಸೇರಿದ್ದಾರೆ.
ನೀನು ಸಂಗೀತಾ ಕೈಗೊಂಬೆ ಎಂದು ಕಾರ್ತಿಕ್‌ಗೆ ಇಶಾನಿ ಹೇಳಿದ್ದು, ಕಾರ್ತಿಕ್‌ಗೆ ಇಷ್ಟವಾಗಿಲ್ಲ, ಅದಕ್ಕೆ ಕಾರ್ತಿಕ್ ನಿನಗೆ ಒಬ್ಬಳೇ ಆಡುವ ತಾಕತ್ತಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಇಶಾನಿ ಹೆಣ್ಣುಮಕ್ಕಳಿಗೆ ಗೆಲ್ಲೋ ತಾಕತ್ತಿಲ್ಲ ಎಂದು ಕಾರ್ತಿಕ್ ಹೇಳಿದ್ದಾಗಿ ಮನೆಮಂದಿಗೆಲ್ಲಾ ಹೇಳಿದ್ದಾರೆ. ಅಲ್ಲೇ ಇದ್ದ ಮೈಕೆಲ್ ಇದು ಸುಳ್ಳು, ಕಾರ್ತಿಕ್ ಹಾಗೆ ಹೇಳಿಲ್ಲ ಎಂದು ಹೇಳಿದ್ದಾರೆ.
ಇಷ್ಟಕ್ಕೇ ಸಿಟ್ಟಾದ ಇಶಾನಿ ಗರ್ಲ್‌ಫ್ರೆಂಡ್ ಪರವಹಿಸದ ನೀನು ಒಬ್ಬ ಬಾಯ್‌ಫ್ರೆಂಡ್ ಆ ಥೂ ಎಂದು ಕೂಗಾಡಿದ್ದಾರೆ, ಯಾವುದು ಸರಿ-ತಪ್ಪೋ ನಾನು ಹಾಗೇ ನಡ್ಕೋತಿನಿ ಎಂದು ಮೈಕೆಲ್ ಹೇಳಿದ್ದಾರೆ, ಕಡೆಗೆ ಮೈಕೆಲ್ ಇಶಾನಿಯನ್ನು ಸೈಕೋ ಎಂದಿದ್ದು, ಈ ಬ್ರೇಕಪ್‌ಗೆ ಕಾರಣವಾಗಿದೆ.