Monday, March 27, 2023

Latest Posts

ಬಾಬರ್ ಅಜಮ್ ʼವಿಶ್ವದಲ್ಲೇ ಬೆಸ್ಟ್ ʼ ಅಂದ್ರು ವಾನ್.. ಸಾಮಾಜಿಕ ತಾಣದಲ್ಲಿ ಆಡಿಕೊಂಡು ನಕ್ಕ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಾವಲ್ಪಿಂಡಿಯಲ್ಲಿ ಸಾಗುತ್ತಿರುವ ಮೊದಲ ಟೆಸ್ಟ್‌ನಲ್ಲಿ ʼಕಳಪೆ ಪಿಚ್‌ʼ ಲಾಭ ಪಡೆದ ಇಂಗ್ಲೆಂಡ್ – ಪಾಕಿಸ್ತಾನ ಬ್ಯಾಟ್ಸ್‌ ಮನ್‌ ಗಳು ರನ್‌ ಗಳ ದೊಡ್ಡ ರಾಶಿಯನ್ನೇ ಗುಡ್ಡೆಹಾಕುತಿತದ್ದಾರೆ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಒಟ್ಟು 657 ರನ್ ಗಳಿಸಿದರೆ, ಪ್ರತಿಯಾಗಿ ಪಾಕಿಸ್ತಾನವು 579 ರನ್‌ ಕಲೆಹಾಕಿತು.
ಸತ್ವವಿಲ್ಲದ ಪಿಚ್‌ ನ ಸಂಪೂರ್ಣ ಲಾಭ ಪಡೆದ ಪಾಕ್ ನಾಯಕ ಬಾಬರ್ 136 ರನ್‌ ಗಳಿಸುವ ಮೂಲಕ ಗರಿಷ್ಠ ಸ್ಕೋರ್ ಮಾಡಿದರು. ಬಾಬರ್ ಅಜಂ ಶತಕಕ್ಕೆ ಫಿದಾ ಆಗಿರುವ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ಬಾಬರ್ ರನ್ನು ಹೊಗಳಿ ಅಟ್ಟಕ್ಕೇರಿಸಿದ್ದು, ಆತ ʼಮೂರು ಫಾರ್ಮ್ಯಾಟ್‌ ನಲ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ ಮನ್’ ಎಂದು ಶ್ಲಾಘಿಸಿದ್ದಾರೆ. ವಾನ್‌ ಹೇಳಿಕೆಗೆಯನ್ನು ಫ್ಯಾನ್ಸ್‌ ತಮಾಷೆಯಾಗಿ ತೆಗೆದುಕೊಂಡಿದ್ದು, ವಾನ್‌ ಗೆ ಕ್ರಿಕೆಟ್‌ ತಿಳಿವಳಿಕೆ ಕಡಿಮೆ ಇದೆ ಎಂದು ಬಗೆಬಗೆಯಾಗಿ ಕಾಮೆಂಟ್‌ ಮಾಡಿ ಜಾಡಿಸುತ್ತಿದ್ದಾರೆ.
ಬಾಬರ್ ವಿಶ್ವದ ಅಗ್ರ ಬ್ಯಾಟರ್‌ಗಳಲ್ಲಿ ಒಬ್ಬರು ಎಂಬುದನ್ನು ಅಲ್ಲಗಳೆಯುವಂತಿಲ್ಲವಾದರೂ, ಕೊಹ್ಲಿ, ತೆಂಡೂಲ್ಕರ್‌ ರಂತಹ ಶ್ರೇಷ್ಠ ಆಟಗಾರರನ್ನು ಕ್ರಿಕೆಟ್‌ ಜಗತ್ತು ಕಂಡಿದೆ.  ವಾನ್ ಅವರ ʼಮೂರು ಫಾರ್ಮಾಟ್ಸ್‌ ಶ್ರೇಷ್ಠʼ ಎಂಬ ಬಾಬರ್ ಪ್ರಶಂಸೆ ಅತ್ಯಂತ ಉತ್ಪೇಕ್ಷೆಯಿಂದ ಕೂಡಿದೆ ಎಂಬುದು ಕ್ರೀಡಾಭಿಮಾನಿಗಳ ವಾದ.

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!