Saturday, April 1, 2023

Latest Posts

ಬಾಲಕ ತಂದ ಫಜೀತಿ: ಅಪ್ಪನ ಜೇಬಿಗೆ ಬಿತ್ತು ಸಾವಿರಾರು ರೂಪಾಯಿ ಕತ್ತರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳೂ ಮೊಬೈಲ್‌ಗೆ ಒಗ್ಗಿಕೊಳ್ಳುತ್ತಿದ್ದಾರೆ. ಅದರೊಂದಿಗೇ ಆಟ, ಪಾಠ, ಸ್ನೇಹಿತರೊಂದಿಗೆ ಚಾಟ್ ಇತ್ಯಾದಿ..ಈ ಮೊಬೈಲ್‌ಗಳಿಂದ ಆಗುವ ಅನಾಹುತ ಕೂಡ ಅಷ್ಟಿಷ್ಟಲ್ಲ. ಆರು ಬಾಲಕನೊಬ್ಬ ಸ್ಮಾರ್ಟ್ ಫೋನ್ ಹಿಡಿದು ಹಾಸಿಗೆಯ ಮೇಲೆ ಕುಳಿತಿದ್ದ. ಆತನ ತಂದೆ ಮೊಬೈಲ್ ಗೇಮ್ ಆಡುತ್ತಿರಬೇಕು ಎಂದು ಭಾವಿಸಿದ್ದಾರೆ ಆದರೆ, ಅದೇ ಅವರಿಗೆ ಸಂಕಷ್ಟ ತಂದೊಡ್ಡಿದೆ. ಬಾಲಕನಿಗೆ ಅರಿವಿಲ್ಲದೇ ಫುಡ್ ಡೆಲಿವರಿ ಆ್ಯಪ್ ನಲ್ಲಿ ರೂ.80,000 ಮೌಲ್ಯದ ಆಹಾರ ಪದಾರ್ಥಗಳ ಆರ್ಡರ್ ಮಾಡಿದ್ದಾನೆ.

ಒಂದೊಂದೇ ಆಹಾರ ಪದಾರ್ಥಗಳು ಮನೆಗೆ ಬರುತ್ತಿದ್ದುದನ್ನು ಕಂಡು ತಂದೆ ಬೆಚ್ಚಿಬಿದ್ದರು. ಅವರ ಬ್ಯಾಂಕ್ ಖಾತೆಯಿಂದ ರೂ.80 ಸಾವಿರ ಕಡಿತವಾಗಿದೆ ಎಂದು ತಿಳಿದು ಬಂದಿದೆ. ಸ್ಮಾರ್ಟ್ ಫೋನ್ ತೆಗೆದುಕೊಂಡು ಚೆಕ್‌ ಮಾಡಿದ ಬಳಿಕ ಸತ್ಯ ತಿಳಿದಿದೆ. ಅಮೆರಿಕದ ಚೆಸ್ಟರ್‌ಫೀಲ್ಡ್ ಟೌನ್‌ಶಿಪ್ ಪ್ರದೇಶದ ಮೆಟ್ರೋ ಡೆಟ್ರಾಯಿಟ್‌ನಲ್ಲಿ ಈ ಘಟನೆ ನಡೆದಿದೆ.

ಬಾಲಕನ ತಂದೆ ಕೀತ್ ಸ್ಟೋನ್‌ಹೌಸ್ ಇತ್ತೀಚೆಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದು, ತನ್ನ ಮಗ ಗ್ರೂಬ್ ಫುಡ್ ಡೆಲಿವರಿ ಆ್ಯಪ್‌ನಲ್ಲಿ 80 ಸಾವಿರ ರೂಪಾಯಿ ಮೌಲ್ಯದ ಆಹಾರವನ್ನು ಆರ್ಡರ್ ಮಾಡಿದ್ದಾನೆ ಮತ್ತು ಪ್ರತಿ ಆರ್ಡರ್‌ಗೆ ಆಹಾರದ ದರದ 25% ಟಿಪ್‌ ಕೊಟ್ಟಿದ್ದಾನೆ. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನೂ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಚಿಕನ್, ಸ್ಯಾಂಡ್‌ವಿಚ್‌ನಂತಹ ವಸ್ತುಗಳನ್ನು ಡೆಲಿವರಿ ಬಾಯ್‌ಗಳು ಒಂದೊಂದಾಗಿ ತರುತ್ತಿರುವುದನ್ನು ಕಂಡು ಅಚ್ಚರಿಯಾಯಿತು ಎಂದು ನಗುತ್ತಾ ವಿವರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!