CLOUD POLLUTION | ಮೋಡಗಳಲ್ಲಿ ಮೈಕ್ರೋ ಪ್ಲಾಸ್ಟಿಕ್? ಆಘಾತಕಾರಿ ಅಂಶ ಬಯಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಲ ಮಾಲೀನ್ಯ, ವಾಯು ಮಾಲೀನ್ಯ, ಪರಿಸರ ಮಾಲೀನ್ಯ.. ಇದೀಗ ಮೋಡವೂ ಮಲಿನವಾಗುತ್ತಿದೆ!

ಹೌದು, ಜಪಾನ್‌ನ ವಿಜ್ಞಾನಿಗಳು ಕ್ಲೌಡ್ ವಾಟರ್‌ನ್ನು ಪರೀಕ್ಷಿಸಿದ್ದು, ಇದರಲ್ಲಿ ೬.೭-೧೩.೯ರಷ್ಟು ಮೈಕ್ರೋಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ.

ಮೋಡಗಳಲ್ಲಿ ಮೈಕ್ರೋ ಪ್ಲಾಸ್ಟಿಕ್ ಇರುವಿಕೆಯಿಂದ ಹವಾಮಾನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಸಂಶೋಧನೆಗಳು ನಡೆಯಬೇಕಿದೆ.

ಜಪಾನ್‌ನ ವಿಜ್ಞಾನಿಗಳು ಶಿಖರಗಳನ್ನು ಆವರಿಸಿರುವ ಮಂಜಿನಿಂದ ನೀರನ್ನು ಸಂಗ್ರಹಿಸಿ ಪರಿಶೀಲಿಸಿದ್ದಾರೆ. ಇದರಲ್ಲಿ ಒಟ್ಟಾರೆ ಒಂಬತ್ತು ವಿಭಿನ್ನ ರೀತಿಯ ಪ್ಲಾಸ್ಟಿಕ್ ಪತ್ತೆಯಾಗಿದೆ. ಜೊತೆಗೆ ರಬ್ಬರ್ ರೀತಿಯ ವಸ್ತುವೂ ಪತ್ತೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!