ಹೈ-ಸ್ಪೀಡ್ ಕೇಬಲ್‌ಗಳನ್ನು ಅಭಿವೃದ್ಧಿಪಡಿಸುವ ಲುಮೆನಿಸಿಟಿ ಲಿಮಿಟೆಡ್ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡ ಮೈಕ್ರೋಸಾಫ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಮುಂದಿನ ಪೀಳಿಗೆಯ ಹಾಲೋ ಕೋರ್ ಫೈಬರ್ (HCF) ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿರುವ Lumenisity ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಮೈಕ್ರೋಸಾಫ್ಟ್ ಘೋಷಿಸಿದೆ.

Lumenisity ನ ನವೀನ HCF ಉತ್ಪನ್ನವು ಜಾಗತಿಕವಾಗಿ ಉದ್ಯಮ ಮತ್ತು ದೊಡ್ಡ-ಪ್ರಮಾಣದ ಸಂಸ್ಥೆಗಳಿಗೆ ವೇಗದ, ವಿಶ್ವಾಸಾರ್ಹ ಮತ್ತು ಸುರಕ್ಷಿತ ನೆಟ್‌ವರ್ಕಿಂಗ್ ಅನ್ನು ಸಂಪರ್ಕಿಸಲು ಸಹಾಯಕವಾಗಿದೆ ಎಂದು ಟೆಕ್ ದೈತ್ಯ ಶುಕ್ರವಾರ ಬ್ಲಾಗ್‌ಪೋಸ್ಟ್‌ನಲ್ಲಿ ಹೇಳಿದೆ.

ಈ ಸ್ವಾಧೀನಪಡಿಸಕೊಳ್ಳುವಿಕೆಯು ಮೈಕ್ರೋಸಾಫ್ಟ್ ತನ್ನ ಜಾಗತಿಕ ಕ್ಲೌಡ್ ಮೂಲಸೌಕರ್ಯವನ್ನು ಇನ್ನಷ್ಟು ಉತ್ತಮಗೊಳಿಸುವ ಸಾಮರ್ಥ್ಯವನ್ನು ವಿಸ್ತರಿಸಲು ಸಹಾಯಕವಾಗಲಿದೆ ಮತ್ತು ಅದರ ಕ್ಲೌಡ್ ಪ್ಲಾಟ್‌ಫಾರ್ಮ್ ಮತ್ತು ಸೇವೆಗಳನ್ನು ಗ್ರಾಹಕರಿಗೆ ಕಟ್ಟುನಿಟ್ಟಾದ ಲೇಟೆನ್ಸಿ ಮತ್ತು ಭದ್ರತಾ ಅಗತ್ಯತೆಗಳೊಂದಿಗೆ ಸೇವೆ ಸಲ್ಲಿಸಲು ಅನುಕೂಲ ಕಲ್ಪಿಸಲಿದೆ.

ಆರೋಗ್ಯ, ಹಣಕಾಸು ಸೇವೆಗಳು, ಉತ್ಪಾದನೆ, ಚಿಲ್ಲರೆ ವ್ಯಾಪಾರ ಸೇರಿದಂತೆ ವ್ಯಾಪಕ ಶ್ರೇಣಿಯ ಕೈಗಾರಿಕೆಗಳು ಈ ತಂತ್ರಜ್ಞಾನದಿಂದ ಪ್ರಯೋಜನವನ್ನು ಪಡೆಯಬಹುದಾಗಿದೆ.
.
ಎಚ್‌ಸಿಎಫ್ ತಂತ್ರಜ್ಞಾನವು ಕ್ಲೌಡ್‌ನಲ್ಲಿ ವೈದ್ಯಕೀಯ ಇಮೇಜಿಂಗ್ ಡೇಟಾವನ್ನು ಸಂಗ್ರಹಿಸಲು ಮತ್ತು ಹಂಚಿಕೊಳ್ಳಲು ಪೂರೈಕೆದಾರರನ್ನು ಸಕ್ರಿಯಗೊಳಿಸುವ ಮೂಲಕ ಆರೋಗ್ಯ ಉದ್ಯಮದ ಚಟುವಟಿಕೆಗಳಿಗೆ ವೇಗಒದಗಿಸಬಲ್ಲುದು. ಏಕೆಂದರೆ ಇದು ದೊಡ್ಡ ಡೇಟಾ ಸೆಟ್‌ಗಳ ಗಾತ್ರ ಮತ್ತು ಪರಿಮಾಣವನ್ನು ನಿಭಾಯಿಸುತ್ತದೆ.

ಹೆಚ್ಚುವರಿಯಾಗಿ, ಡಿಜಿಟಲ್ ಆರ್ಥಿಕತೆಯ ಅಭಿವೃದ್ಧಿಯೊಂದಿಗೆ, ವ್ಯಾಪಕ ಪ್ರದೇಶದಲ್ಲಿ ವೇಗದ, ಸುರಕ್ಷಿತ ವಹಿವಾಟುಗಳನ್ನು ನಡೆಸಲು ಇದು ಸಹಾಯಕವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!