ವಿಂಡೋಸ್‌ ಆಫೀಸ್‌ ಅಪ್ಲಿಕೇಷನ್‌ ಗಳಲ್ಲಿ ಎಐ ಟೂಲ್ ತರಲಿದೆ ಮೈಕ್ರೋಸಾಫ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಾಫ್ಟ್‌ವೇರ್‌ ದಿಗ್ಗಜ ಮೈಕ್ರೋಸಾಫ್ಟ್‌ ತನ್ನ ಆಫೀಸ್‌ ಅಪ್ಲೀಕೇಷನ್‌ ಗಳನ್ನು ತರಲು ಯೋಚಿಸುತ್ತಿದ್ದು ಔಟ್‌ಲುಕ್, ಪವರ್‌ಪಾಯಿಂಟ್, ಎಕ್ಸೆಲ್ ಮತ್ತು ವರ್ಡ್ ಗಳಲ್ಲಿ ಕೃತಕ ಬುದ್ಧಿಮತ್ತೆ (AI) ಟೂಲ್‌ ಗಳನ್ನು ತರಲು ಚಿಂತಿಸಿದೆ.

ಗುರುವಾರ ನಡೆದ ಈವೆಂಟ್‌ ಒಂದರಲ್ಲಿ ಮೈಕ್ರೋಸಾಫ್ಟ್‌ ಈ ಕುರಿತು ಘೋಷಣೆಗಳನ್ನು ಮಾಡಿದ್ದು ಶೀಘ್ರದಲ್ಲೇ ʼAIಕೋಪೈಲಟ್‌ʼ ಸೌಲಭ್ಯವನ್ನು ಮೈಕ್ರೋಸಾಫ್ಟ್ 365 ಬಳಕೆದಾರರು ಪಡೆಯಲಿದ್ದಾರೆ ಎಂದು ಹೇಳಿದೆ. “ಬಳಕೆದಾರರು ಲೈವ್‌ ಇನ್‌ ಕೋಪೈಲಟ್‌ ಸೌಲಭ್ಯವನ್ನು ಪಡೆಯಲಿದ್ದು ಇದು ಅವರಿಗೆ ಕೆಲಸದಲ್ಲಿ ಹೆಚ್ಚಿನ ಸುಧಾರಣೆಗೆ ಸಲಹೆಗಳನ್ನು ನೀಡುತ್ತದೆ. ಅಪ್ಲಿಕೇಶನ್, ಫ್ಲೋ ಅಥವಾ ಬೋಟ್ ಅನ್ನು ನಿರ್ಮಿಸುವಲ್ಲಿ ಇದು ಸಹಾಯಕವಾಗಲಿದ್ದು ಕೆಲವೇ ಸೆಕೆಂಡುಗಳಲ್ಲಿ ಅಭಿವೃದ್ಧಿ ಪಡಿಸುವ ಸಾಮರ್ಥ್ಯ ಹೊಂದಿದೆ” ಎಂದು ಮೈಕ್ರೋಸಾಫ್ಟ್‌ ಹೇಳಿಕೆ ತಿಳಿಸಿದೆ.

ಪವರ್ ಅಪ್ಲಿಕೇಶನ್‌ಗಳಲ್ಲಿ ಡೇಟಾವನ್ನು ನಿರ್ವಹಿಸುವಲ್ಲಿ ಕೋ ಪೈಲಟ್‌ ಸಹಾಯಕವಾಗಲಿದೆ. ಬಳಕೆದಾರರು Copilot ಅನ್ನು ಬಳಸಿಕೊಂಡು ಸ್ವಯಂಚಾಲಿತವಾಗಿ ಡೇಟಾ ಟೇಬಲ್ ಗಳನ್ನು ರಚಿಸಬಹುದಾಗಿದೆ. ವೃತ್ತಿಪರ ಡೆವಲಪರ್‌ಗಳು ಹೆಚ್ಚು ಸಂಕೀರ್ಣವಾದ ಕೋಡ್, ಘಟಕಗಳು ಮತ್ತು ಏಕೀಕರಣಗಳ ಮೇಲೆ ತಮ್ಮ ಗಮನವನ್ನು ಕೇಂದ್ರಿಕರಿಸಲು ಇದು ಸಹಾಯಕವಾಗಲಿದ್ದು ಹೆಚ್ಚಿನ ಸಮಯವನ್ನು ಉಳಿಸಲಿದೆ ಎಂದು ಮೈಕ್ರೋಸಾಫ್ಟ್‌ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!