‘MIG-21’ ಯುದ್ಧ ವಿಮಾನ ಹಾರಾಟ ನಿಷೇಧ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಿಗ್ 21 ವಿಮಾನದ ಹಾರಾಟವನ್ನ ಭಾರತೀಯ ವಾಯುಪಡೆಯು ನಿಷೇಧಿಸಿದೆ.
ಇತ್ತೀಚೆಗಷ್ಟೇ ರಾಜಸ್ಥಾನದಲ್ಲಿ ಮಿಗ್ 21 ವಿಮಾನ ಪತನಗೊಂಡು ಮೂವರು ಸಾವನ್ನಪ್ಪಿದ್ದರು.ಹೀಗಾಗಿ ಮಿಗ್ -21 ವಿಮಾನ ಫ್ಲೀಟ್‌ನ ಹಾರಾಟವನ್ನು ಸದ್ಯಕ್ಕೆ ನಿಲ್ಲಿಸುವ ನಿರ್ಧಾರವನ್ನ ಭಾರತೀಯ ವಾಯುಪಡೆ ತೆಗೆದುಕೊಂಡಿದೆ.

MiG ರೂಪಾಂತರಗಳ ಮೊದಲ ಫ್ಲೀಟ್ ಅನ್ನು 1963 ರಲ್ಲಿ ಭಾರತೀಯ ವಾಯುಪಡೆಗೆ ಸೇರಿಸಲಾಯಿತು ಮತ್ತು ನಂತರದ ದಶಕಗಳಲ್ಲಿ ಭಾರತವು 700 ಮಿಗ್-ವೇರಿಯಂಟ್ ವಿಮಾನಗಳನ್ನ ಖರೀದಿಸಿತು.

IAF ತನ್ನ ವಯಸ್ಸಾದ ಫೈಟರ್ ಫ್ಲೀಟ್ ಅನ್ನು ಬದಲಿಸಲು ಸಹಾಯ ಮಾಡಲು, ಕಳೆದ ವರ್ಷ ಫೆಬ್ರವರಿಯಲ್ಲಿ ರಕ್ಷಣಾ ಸಚಿವಾಲಯವು 83 ತೇಜಸ್ ಯುದ್ಧ ವಿಮಾನಗಳ ಖರೀದಿಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನೊಂದಿಗೆ ₹48,000-ಕೋಟಿ ಒಪ್ಪಂದಕ್ಕೆ ಸಹಿ ಹಾಕಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!