8ನೇ ಮಗುವನ್ನು ಸ್ವಾಗತಿಸಿದ ಬ್ರಿಟನ್‌ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಬ್ರಿಟನ್‌ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ 58ನೇ ವಯಸ್ಸಿನಲ್ಲಿ ಮತ್ತೊಮ್ಮೆ ಅಪ್ಪನಾಗುತ್ತಿದ್ದಾರೆ.
ತಮ್ಮ 8ನೇ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಅವರ 3ನೇ ಪತ್ನಿ ಕ್ಯಾರಿ ಜಾನ್ಸನ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ.

ಕ್ಯಾರಿ ಜಾನ್ಸನ್‌ರೊಂದಿಗೆ ಈ ಮಗು ಕನ್ಸರ್ವೇಟಿವ್ ಪಕ್ಷದ ನಾಯಕ ಬೋರಿಸ್ ಜಾನ್ಸನ್ ಅವರೊಂದಿಗೆ ಮೂರನೇ ಮಗುವಾಗಿರುತ್ತದೆ. ಈ ದಂಪತಿಗೆ ಈಗಾಗಲೇ ವಿಲ್ಫ್ ಮತ್ತು ರೋಮಿ ಎಂಬ ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ ಕ್ರಮವಾಗಿ 2020 ಮತ್ತು 2021 ರಲ್ಲಿ ಅಂದರೆ ಬೋರಿಸ್ ಜಾನ್ಸನ್‌ ಪ್ರಧಾನಿಯಾಗಿದ್ದ ಅವಧಿಯಲ್ಲಿ ಜನಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ಸುದ್ದಿ ಹಂಚಿಕೊಂಡ ಕ್ಯಾರಿ ಜಾನ್ಸನ್‌, ತನ್ನ ಇಬ್ಬರು ಮಕ್ಕಳೊಂದಿಗೆ ತನ್ನ ಫೋಟೋವನ್ನು ಪೋಸ್ಟ್‌ ಮಾಡಿದ್ದು ಮತ್ತು “ಕೆಲವೇ ವಾರಗಳಲ್ಲಿ ತಂಡದ ನೂತನ ಸದಸ್ಯರು ಆಗಮಿಸುತ್ತಿದ್ದಾರೆ” ಎಂದು ಬರೆದಿದ್ದಾರೆ. ಅಲ್ಲದೆ, ತಾನು ಕಳೆದ 8 ತಿಂಗಳಿನಿಂದ ಸಾಕಷ್ಟು ದಣಿದಿದ್ದೇನೆ. ಆದರೆ ಈ ಪುಟ್ಟ ಸದಸ್ಯರನ್ನು ಭೇಟಿಯಾಗಲು ನಾವು ಹೆಚ್ಚು ಕಾಯಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.
ವಿಲ್ಫ್ ಮತ್ತೆ ದೊಡ್ಡ ಸಹೋದರನಾಗುವ ಬಗ್ಗೆ ಉತ್ಸುಕನಾಗಿದ್ದಾನೆ ಮತ್ತು ಅದರ ಬಗ್ಗೆ ನಾನ್‌ಸ್ಟಾಪ್‌ ಆಗಿ ಮಾತನಾಡುತ್ತಲೇ ಇದ್ದಾನೆ. ಆದರೆ, ರೋಮಿಗೆ ಏನು ಬರಲಿದೆ ಎಂಬ ಕ್ಲೂ ಸಹ ಇಲ್ಲ ಎನಿಸುತ್ತದೆ. ಅವಳಿಗೆ ಶೀಘ್ರದಲ್ಲೇ ಗೊತ್ತಾಗುತ್ತದೆ’ ಎಂದೂ ಅವರು ಹೇಳಿದರು.

ಬೋರಿಸ್‌ ಜಾನ್ಸನ್ ತನ್ನ ಹಿಂದಿನ ಮದುವೆಯಿಂದ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ. ಮರೀನಾ ವ್ಹೀಲರ್‌ ಅವರನ್ನು ಈ ಹಿಂದೆ ಬ್ರಿಟನ್‌ ಮಾಜಿ ಪ್ರಧಾನಿ ವಿವಾಹವಾಗಿದ್ದರು. ಅಷ್ಟೇ ಅಲ್ಲದೆ, ಕಲಾ ಸಲಹೆಗಾರರಾದ ಹೆಲೆನ್ ಮ್ಯಾಕಿನ್ಟೈರ್ ಅವರೊಂದಿಗೆ ಮತ್ತೊಂದು ಮಗುವನ್ನು ಹೊಂದಿದ್ದಾರೆ. ಬೋರಿಸ್‌ ಜಾನ್ಸನ್ ಮೂರು ಬಾರಿ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ.

ಸುಮಾರು 200 ವರ್ಷಗಳ ನಂತರ ಬೋರಿಸ್‌ ಜಾನ್ಸನ್ ಅವರು ಅಧಿಕಾರದಲ್ಲಿದ್ದಾಗ ವಿವಾಹವಾದ ಮೊದಲ ಪ್ರಧಾನ ಮಂತ್ರಿ ಎನಿಸಿಕೊಂಡಿದ್ದರು ಎಂದು ಬಿಬಿಸಿ ವರದಿ ಮಾಡಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!