ವಲಸಿಗರು ಮತ್ತು ತಾಯ್ನಾಡಿಗೆ ಹಿಂತಿರುಗಿದವರ ಪರಿಹಾರ-ಪುನರ್ವಸತಿ ಯೋಜನೆ ಮುಂದುವರಿಕೆಗೆ ಕೇಂದ್ರ ಸರಕಾರ ಅಸ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ವಲಸಿಗರು ಮತ್ತು ತಾಯ್ನಾಡಿಗೆ ಹಿಂತಿರುಗಿದವರ ಪರಿಹಾರ ಮತ್ತು ಪುನರ್ವಸತಿ ಯೋಜನೆಯ ಗುಚ್ಛದಡಿ ಹಾಲಿ ಇರುವ ಏಳು ಉಪಯೋಜನೆಗಳನ್ನು ಒಟ್ಟು ₹ 1,452 ಕೋಟಿ ಮೊತ್ತದೊಂದಿಗೆ 2025-26ರವರೆಗೆ ಮುಂದುವರಿಕೆ ಪ್ರಸ್ತಾವಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ಅನುಮೋದನೆ ನೀಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಗೃಹ ಸಚಿವಾಲಯದ ಮೂಲಕ ಗುಚ್ಛ ಯೋಜನೆಯಡಿ ನೆರವು ಫಲಾನುಭವಿಗಳಿಗೆ ತಲುಪುವುದನ್ನು ಈ ಅನುಮೋದನೆ ಖಾತ್ರಿಪಡಿಸುತ್ತದೆ. ಈ ಯೋಜನೆಯು ನಿರಾಶ್ರಿತರಾಗಿ ಬಳಲುತ್ತಿರುವ ವಲಸಿಗರು ಮತ್ತು ಸ್ವದೇಶಕ್ಕೆ ವಾಪಸ್ಸಾದವರಿಗೆ ಸಮಂಜಸ ಆದಾಯ ಗಳಿಸಲು ಮತ್ತು ಮುಖ್ಯವಾಹಿನಿಯ ಆರ್ಥಿಕ ಚಟುವಟಿಕೆಗಳಲ್ಲಿ ಅವರ ಸೇರ್ಪಡೆಗೆ ಅನುಕೂಲ ಕಲ್ಪಿಸುತ್ತದೆ. ಸರಕಾರವು ಬೇರೆ ಬೇರೆ ಸಮಯದಲ್ಲಿ ನಾನಾ ಯೋಜನೆಗಳನ್ನು ಆರಂಭಿಸಿತ್ತು.

ಏಳು ಉಪ ಯೋಜನೆಗಳು:

  1. ಜಮ್ಮು ಮತ್ತು ಕಾಶ್ಮೀರ ಮತ್ತು ಛಾಂಬ್‌ನ ಪಾಕ್ ಆಕ್ರಮಿತ ಪ್ರದೇಶಗಳ ಸ್ಥಳಾಂತರಗೊಂಡ ಕುಟುಂಬಗಳ ಪರಿಹಾರ ಮತ್ತು ಪುನರ್ವಸತಿ.
  2. ಶ್ರೀಲಂಕಾ ತಮಿಳು ನಿರಾಶ್ರಿತರಿಗೆ ಪರಿಹಾರದ ನೆರವು.
  3. ತ್ರಿಪುರಾದಲ್ಲಿನ ಪರಿಹಾರ ಶಿಬಿರಗಳಲ್ಲಿ ಇರುವ ಬ್ರೂಸ್‌ಗಳಿಗೆ ನೆರವಿನ ಪರಿಹಾರ.
  4. 1984ರ ಸಿಖ್ ವಿರೋಧಿ ಗಲಭೆ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ.
  5. ಭಯೋತ್ಪಾದನಾ ಚಟುವಟಿಕೆ, ದಂಗೆ, ಕೋಮು/ಎಡಪಂಥೀಯ ಉಗ್ರಗಾಮಿ ಹಿಂಸಾಚಾರ ಮತ್ತು ಗಡಿಯಾಚೆಯಿಂದ ಗುಂಡಿನ ದಾಳಿ ಮತ್ತು ಭಾರತೀಯ ಭೂಪ್ರದೇಶದಲ್ಲಿ ಗಣಿ/ಅತ್ಯಾಧುನಿಕ ಸೋಟಕ್ಕೆ ಬಲಿಪಶುಗಳಾದವರು ಸೇರಿದಂತೆ ಭಯೋತ್ಪಾದನಾ ಹಿಂಸಾಕೃತ್ಯಗಳಿಂದ ಸಂತ್ರಸ್ತ ನಾಗರಿಕರ ಕುಟುಂಬಗಳಿಗೆ ಆರ್ಥಿಕ ನೆರವು ಮತ್ತು ಇತರ ಸೌಲಭ್ಯಗಳು.
  6. ಕೇಂದ್ರ ಟಿಬೆಟಿಯನ್ ಪರಿಹಾರ ಸಮಿತಿಗೆ (ಸಿಟಿಆರ್‌ಸಿ) ಸಹಾಯಧನ.
  7. ಕೂಚ್ ಬೆರ್ಹಾ ಜಿಲ್ಲೆಯಲ್ಲಿ ನೆಲೆಗೊಂಡಿರುವ ಭಾರತದಲ್ಲಿನ 51 ಹಿಂದಿನ ಬಾಂಗ್ಲಾದೇಶದಿಂದ ಸುತ್ತುವರಿದಿರುವ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಮತ್ತು ಬಾಂಗ್ಲಾದೇಶದಲ್ಲಿನ ಹಿಂದಿನ ಭಾರತದಿಂದ ಸುತ್ತುವರಿದ ಪ್ರದೇಶಗಳಿಂದ ವಾಪಸ್ಸಾದ 922 ಜನರಿಗೆ ಪುನರ್ವಸತಿಗೆ ಪಶ್ಚಿಮ ಬಂಗಾಳ ಸರಕಾರಕ್ಕೆ ಸಹಾಯಧನ ಒದಗಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!