‘ರಾಧೆ ಶ್ಯಾಮ್’ ಎರಡನೇ ಟ್ರೇಲರ್ ಬಿಡುಗಡೆ: ಹೆಚ್ಚಾಯಿತು ಅಭಿಮಾನಿಗಳ ಕ್ರೇಜ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ರಾಧೆ ಶ್ಯಾಮ್’ ಈಗಾಗಲೇ ಮೊದಲ ಟ್ರೇಲರ್ ಬಿಡುಗಡೆಗೊಂಡು ಅಭಿಮಾನಿಗಳಿಗೆ ಹತ್ತಿರವಾಗಿದ್ದು, ಇದೀಗ ಎರಡನೇ ಟ್ರೇಲರ್ ಬಿಡುಗಡೆಯಾಗಿದೆ.
1.04 ನಿಮಿಷಗಳ ಟ್ರೇಲರ್ ಇದಾಗಿದ್ದು, ಇದರಲ್ಲಿ10 ಹಲವು ಕುತೂಹಲಕಾರಿ ಸಂಗತಿಯನ್ನು ಕಾಣಬಹುದಾಗಿದೆ.
ಇನ್ನು ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ಧತೆ ಮಾಡಿದ್ದು, ಈ ಮೂಲಕ ಎರಡು ಟ್ರೇಲರ್ ಬಿಡುಗಡೆ ಮಾಡಿ ಅಬಿಮಯಿಗಳಿಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ.
ರಾಧೆ ಶ್ಯಾಮ್ ಚಿತ್ರವು ಬರುವ ಮಾರ್ಚ್ 11 ರಂದು ಕನ್ನಡ ಸೇರಿ ಹಲವು ಭಾಷೆಯಲ್ಲಿ ಬಿಡುಗಡೆಯಾಲಿದೆ.ಯೂರೋಪ್​​ನಲ್ಲಿ 1970ರಲ್ಲಿ ನಡೆದ ಪ್ರೇಮ ಕಥೆಯೊಂದನ್ನು ಆಧರಿಸಿ ಈ ರಾಧೆ ಶ್ಯಾಮ್ ಚಿತ್ರ ಮೂಡಿಬರಲಿದ್ದು, ಪ್ರಭಾಸ್​ ಜೊತೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ ನಿರ್ದೇಶನವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!