CINE | ಮಿಲ್ಕಿ ಬ್ಯೂಟಿ ಮದುವೆ ಫಿಕ್ಸ್, ವಿಶೇಷ ದಿನ ಆಯ್ಕೆ ಮಾಡಿದ ತಮನ್ನಾ-ವಿಜಯ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಸ್ಟ್ ಸ್ಟೋರೀಸ್-2 ನಂತರ ತಮನ್ನಾ-ವಿಜಯ್ ಡೇಟಿಂಗ್ ಸುದ್ದಿ ಗುಟ್ಟಾಗಿ ಉಳಿದಿಲ್ಲ. ತಮನ್ನಾ ಕೂಡ ಎಲ್ಲಿ ಹೋದರೂ ಬಾಯ್‌ಫ್ರೆಂಡ್ ವಿಜಯ್ ಜೊತೆಯೇ ಓಡಾಟ ನಡೆಸಿದ್ದಾರೆ.

ಇದೀಗ ರಿಲೇಷನ್‌ಶಿಪ್‌ನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಜೋಡಿ ನಿರ್ಧರಿಸಿದ್ದು, ಮದುವೆ ದಿನಾಂಕ ಫಿಕ್ಸ್ ಮಾಡಿದ್ದಾರೆ.

ಹೌದು, ಡೇಟಿಂಗ್ ನಿಜ ಎಂದಮೇಲೆ ಮದುವೆಗೇಕೆ ತಡ ಎಂದು ತಮನ್ನಾ ಪೋಷಕರು ಒತ್ತಡ ಹಾಕಿದ್ದು, ಅಂತೂ ತಮನ್ನಾ ಮದುವೆಗೆ ಒಪ್ಪಿದ್ದಾರೆ.

ಮುಂದಿನ ವರ್ಷ ಫೆಬ್ರವರಿ 14 ರಂದು ಮದುವೆ ಆಗೋ ಬಗ್ಗೆ ಜೋಡಿ ನಿರ್ಧಾರ ಮಾಡಿದೆ ಎನ್ನಲಾಗಿದೆ, ಪ್ರೇಮಿಗಳ ದಿನದಂದು ಹಸಮೆಣೆ ಏರಬೇಕು ಅನ್ನೋ ತಮನ್ನಾ ವಿಜಯ್ ಆಸೆಯಾಗಿದೆಯಂತೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!