ಕೇರಳದಲ್ಲೂ ಮಿಲ್ಮಾ ಹಾಲಿನ ದರ ಹೆಚ್ಚಳ: ಲೀಟರ್‌ಗೆ 6 ರೂ. ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ನಾಟಕದಲ್ಲಿ ಇಂದಿನಿಂದ ನಂದಿನಿ ದರ ಹೆಚ್ಚಳಗೊಂಡಿದ್ದು, ಇದೀಗ ಕೇರಳದ ಹಾಲು ಒಕ್ಕೂಟ ಮಿಲ್ಮಾ (Milma) ಹಾಲಿನ ದರ ಹೆಚ್ಚಳಕ್ಕೆ ಮುಂದಾಗಿದೆ.

ಮಿಲ್ಮಾ ಹಾಲಿನ ದರವನ್ನು ಡಿ.1 ರಿಂದ ಲೀಟರ್‌ಗೆ 6 ರೂ. ಏರಿಕೆಗೆ ನಿರ್ಧರಿಸಿದೆ. ಈ ಹಿಂದೆ 2019ರಲ್ಲಿ ಲೀ.4 ರೂ. ಏರಿಸಲಾಗಿತ್ತು. ಇದೀಗ 3 ವರ್ಷಗಳ ನಂತರ ಲೀ.6 ರೂ. ಏರಿಕೆ ಮಾಡಲು ಮಿಲ್ಮಾ ನಿರ್ಧಾರ ಕೈಗೊಂಡಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮಿಲ್ಮಾ ಫೆಡರೇಶನ್ ಅಧ್ಯಕ್ಷ ಕೆ.ಎಸ್. ಮಣಿ, ಈ ಹಿಂದೆ ಹಾಲಿನ ದರ ಏರಿಕೆ ಮಾಡಿದಾಗ ರೈತರಿಗೆ 3.35 ರೂ. ಸಿಗುತ್ತಿತ್ತು. ಇದೀಗ 6 ರೂ. ಏರಿಕೆ ಮಾಡಿದಾಗ 5.25 ರೈತರಿಗೆ ಸಿಗಲಿದೆ. ಈ ಬಗ್ಗೆ ಮಿಲ್ಮಾ ಹಾಲು ಒಕ್ಕೂಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!