ಭಾರತೀಯ ಸೇನೆಗೆ ಅವಮಾನ: ಕ್ಷಮೆಯಾಚಿಸಿದ ನಟಿ ರಿಚಾ ಚಡ್ಡಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತೀಯ ಸೇನೆ ಕುರಿತು ಬಾಲಿವುಡ್​ ನಟಿ ರಿಚಾ ಚಡ್ಡಾ ಮಾಡಿದ್ದ ‘ಗಾಲ್ವಾನ್​ ಸೇಯ್ಸ್​ ಹಾಯ್​’ ಎಂಬ ವಿವಾದಾತ್ಮಕ ಟ್ವೀಟ್​ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ನಟಿಯ ವಿರುದ್ಧ ಕೇಸ್​ ದಾಖಲಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಇದೀಗ ಇದರಿಂದ ಎಚ್ಚೆತ್ತ ನಟಿ, ಕ್ಷಮೆಯಾಚಿಸಿ ಸ್ಪಷ್ಟನೆ ನೀಡಿದ್ದಾರೆ.

 

ನಟಿ, ಭಾರತ ಮತ್ತು ಚೀನಾ ನಡುವೆ 2020 ರಲ್ಲಿ ಗಾಲ್ವಾನ್ ಘರ್ಷಣೆಯಲ್ಲಿ ಹಲವಾರು ಭಾರತೀಯ ಯೋಧರು ವೀರ ಮರಣವನ್ನಪ್ಪಿದ್ದರು. ಇತ್ತೀಚೆಗೆ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಹೇಳಿಕೆ ನೀಡಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಹಿಂಪಡೆಯಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದಿದ್ದರು. ಅದರ ಸ್ಕ್ರೀನ್​ಶಾಟ್​ ಅನ್ನು ಬಳಸಿದ ‘ಗಾಲ್ವಾನ್​ ಸೇಯ್ಸ್​ ಹಾಯ್​’ ಎಂದು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!