ಮಿನಿ ಟೆಂಪೋ ಡಿಕ್ಕಿ: ಸ್ಥಳದಲ್ಲೇ ರಿಕ್ಷಾ ಚಾಲಕ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉಪ್ಪಿನಂಗಡಿ ಸಮೀಪದ 34 ನೇ ನೆಕ್ಕಿಲಾಡಿ ಗ್ರಾಮದ ಮಾಂಡೋವಿ ಶೋ ರೂಂ ಬಳಿ ಸಂಭವಿಸಿದ ಮಿನಿ ಟೆಂಪೋ ಮತ್ತು ಅಟೋ ರಿಕ್ಷಾ ಡಿಕ್ಕಿ ಅಪಘಾತದಲ್ಲಿ ರಿಕ್ಷಾ ಚಾಲಕ ವಾಸು ಪೂಜಾರಿ (42) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ರಾ ಹೆ 75 ರಲ್ಲಿ ಸಂಭವಿಸಿದ ಈ ಅವಘಡದಲ್ಲಿ ತಂಪು ಪಾನೀಯದ ಮಾರಾಟ ವಿಭಾಗವನ್ನು ನಿರ್ವಹಿಸುತ್ತಿದ್ದ ಜೊತೆ ಜೊತೆಗೆ ಅಟೋ ಚಾಲಕನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದ ವಾಸು ಪೂಜಾರಿ ಉಪ್ಪಿನಂಗಡಿಯಿಂದ ನೆಕ್ಕಿಲಾಡಿಯತ್ತ ಸಂಚರಿಸುತ್ತಿದ್ದಾಗ ಎದುರುಗಡೆಯಿಂದ ವೇಗವಾಗಿ ಬಂದ ಎಟಿಎಂ ಕೇಂದ್ರಗಳಿಗೆ ಹಣದ ಸರಬರಾಜು ಮಾಡುವ ಮಿನಿ ಟೆಂಪೋ ಡಿಕ್ಕಿ ಹೊಡೆಯಿತು. ಡಿಕ್ಕಿಯ ರಭಸಕ್ಕೆ 10 ಅಡಿ ಮೇಲಕ್ಕೆ ನೆಗೆದ ಅಟೋ ರಿಕ್ಷಾ ನೆಲಕ್ಕೆ ಅಪ್ಪಳಿಸಿ ನಜ್ಜುಗುಜ್ಜಾಯಿತು. ಇದರಿಂದ ಅಟೋ ರಿಕ್ಷಾದಲ್ಲಿ ಸಿಲುಕಿದ್ದ ವಾಸು ಪೂಜಾರಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದರು.
ಘಟನಾ ಸ್ಥಳಕ್ಕೆ ಪುತ್ತೂರು ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!