ಬೆಂಗಳೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣ: ಯುವತಿ ಸೇರಿ ಮೂವರ ಬಂಧನ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸ್ನೇಹಿತೆ ಮನೆಗೆ ಹೋಗಲು ಖಾಸಗಿ ಕಂಪನಿಯೊಂದರ ಬೈಕ್​ ಬುಕ್ ಮಾಡಿದ್ದ ಪಾನಮತ್ತ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಮೂವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಬಿಹಾರ ಮೂಲದ ಶಹಬುದ್ದೀನ್, ಹುಳಿಮಾವು‌ ನಿವಾಸಿ ಅರಾಫರ್ ಶರೀಪ್ ಹಾಗೂ ಯುವತಿ ಸೇರಿ ಮೂವರನ್ನು ಬಂಧಿಸಲಾಗಿದೆ. ನ.25ರ ರಾತ್ರಿ ಕೇರಳ ಮೂಲದ ಯುವತಿ ಬಿಟಿಎಂ ಲೇಔಟ್​​ನಿಂದ ಎಲೆಕ್ಟ್ರಾನಿಕ್ ಸಿಟಿ ನಿಲಾದ್ರಿ ನಗರದ ಸ್ನೇಹಿತೆಯ ಮನೆಗೆ ಹೋಗಲು ಈ ಬೈಕ್ ಬುಕ್​​ ಮಾಡಿದ್ದಳು.

ಪಾನಮತ್ತರಾಗಿದ್ದ ಯುವತಿಯನ್ನು ಪಿಕಪ್‌ ಪಾಯಿಂಟ್​​ನಿಂದ ಬೈಕ್ ಸವಾರ ಶಹಬುದ್ದೀನ್ ಪಿಕಪ್‌ ಮಾಡಿದ್ದ. ಅರೆ ಪ್ರಜ್ಞಾವ್ಯವಸ್ಥೆಯಲ್ಲಿದ್ದ ಯುವತಿಯನ್ನು ಕಂಡು ಸ್ನೇಹಿತನಿಗೆ ಕರೆ ಮಾಡಿ ತಮ್ಮ ರೂಮಿಗೆ ಕರೆದೊಯ್ದಿದ್ದಾರೆ. ಬಳಿಕ ಯುವತಿ ಮೇಲೆ‌ ಆತ್ಯಾಚಾರವೆಸಗಿದ್ದಾರೆ. ಕೃತ್ಯ ನಡೆದ ಜಾಗದಲ್ಲಿ ಶಹಬುದ್ದೀನ್ ಸ್ನೇಹಿತೆ ಸಾಥ್ ನೀಡಿದ್ದಳು‌ ಎಂದು ಆಯುಕ್ತರು ತಿಳಿಸಿದ್ದಾರೆ.‌

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!