ಹೊಸದಿಗಂತ ವರದಿ ಬಾಗಲಕೋಟೆ:
ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಮುಚಖಂಡಿ ಕೆರೆಯ ಪರಿಸರದಲ್ಲಿ ಕೈಗೊಳ್ಳುವ ರೂಪಾಯಿ 5 ಕೋಟಿ ವೆಚ್ಚದ ಮಚಖಂಡಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲರು, ಬಾಗಲಕೋಟೆ ಜನಪ್ರಿಯ ಶಾಸಕರಾದ ಡಾ ವೀರಣ್ಣಾ ಚರಂತಿಮಠರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯರಾದ ನಾರಾಯಣಸಾ ಭಾಂಡಗೆ, ಬೂಡಾ ಅಧ್ಯಕ್ಷರಾದ ಬಸಲಿಂಗಪ್ಪ ನಾವಲಗಿ, ನಗರಸಭೆಯ ಅಧ್ಯಕ್ಷರಾದ ಜ್ಯೋತಿ ಭಜಂತ್ರಿ, ಗುರುಬಸವ ಸೂಳಿಭಾವಿ, ಪ್ರಭುಸ್ವಾಮಿ ಸರಗಣಾಚಾರಿ ಸೇರಿದಂತೆ ಸದಸ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.