ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರದ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಯುವ ಪ್ರಗತಿ ಸಚಿವೆ ರೋಜಾ ಸೆಲ್ವಮಣಿ ಅವರ ಕ್ರೀಡಾ ಸ್ಪೂರ್ತಿ ಕಂಡು ನೆಟ್ಟಿಗರು ಭೇಷ್ ಭೇಷ್ ಅನ್ನುತ್ತಿದ್ದಾರೆ.
ಇದಕ್ಕೆ ಕಾರಣವಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿದ್ಯಾರ್ಥಿನಿಯರ ಕಬಡ್ಡಿ ಮ್ಯಾಚ್‌ನ ವಿಡಿಯೋ!
ತಾವು ಪ್ರತಿನಿಧಿಸುವ ಚಿತ್ತೂರು ಜಿಲ್ಲೆಯ ನಗರಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಜಗನ್ನಣ್ಣ ಸ್ಪೋರ್ಟ್ಸ್ ಸೆಲೆಬ್ರೇಷನ್ ಉದ್ಘಾಟನೆ ಸಂದರ್ಭ ಸಚಿವೆ ರೋಜಾ ಖುದ್ದಾಗಿ ವಿದ್ಯಾರ್ಥಿನಿಯರೊಂದಿಗೆ ಕಬಡ್ಡಿ ಆಡಿದ್ದಾರೆ. ಈ ವೇಳೆ ಅವರು ಕಬಡ್ಡಿ… ಕಬಡ್ಡಿ… ಎಂದು ರೈಡ್ ಮಾಡಲು ಹೋದಾಗ ವಿದ್ಯಾರ್ಥಿನಿಯರ ಕೈಯಿಂದ ಬಿಡಿಸಿಕೊಳ್ಳುವ ಯತ್ನದಲ್ಲಿ ನೆಲಕ್ಕೆ ಬೀಳುತ್ತಾರೆ. ತಕ್ಷಣವೇ ಮತ್ತೆ ಮೇಲೆ ಎದ್ದು ವಿದ್ಯಾರ್ಥಿನಿಯರ ಜೊತೆ ಆಟ ಮುಂದುವರಿಸುತ್ತಾರೆ. ರೋಜಾ ಅವರ ಈ ಕ್ರೀಡಾಸ್ಫೂರ್ತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ