ಕಿಡ್ನಾಪ್ ಆಗಿದ್ದ ಮೆಲಿಸ್ಸಾ 51 ವರ್ಷಗಳ ಬಳಿಕ ಮತ್ತೆ ತನ್ನ ಹೆತ್ತವರ ಮಡಿಲಿಗೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇದೊಂದು ಅಪರೂಪದ ಘಳಿಗೆ.
ಬರೋಬ್ಬರಿ ಐವತ್ತು ವರ್ಷಗಳ ಹಿಂದೆ ಅಪಹರಣಕ್ಕೊಳಗಾಗಿದ್ದಾಕೆ ಅಂದು ತನ್ನ ಕುಟುಂಬ ಸದಸ್ಯರನ್ನು ಮತ್ತೆ ಸೇರಿಕೊಂಡಿದ್ದಳು. ಐದು ದಶಕಗಳ ಬಳಿಕ ಕರುಳಕುಡಿ ಕಣ್ಮುಂದೆ ಕಂಡ ಕ್ಷಣದಲ್ಲಿ ಅಲ್ಲಿದ್ದ ಆ ವೃದ್ಧ ಹೃದಯಗಳು ಕಣ್ಣೀರಾದವು. ಈ ಅಪರೂಪದ ವಿದ್ಯಾಮಾನ ನಡೆದಿರುವುದು ಅಮೆರಿಕದ ಫೋರ್ಟ್ ವರ್ತ್ ಪಟ್ಟಣದಲ್ಲಿ.
ಮೆಲಿಸ್ಸಾ ಎಂಬಾಕೆ 1971ರಲ್ಲಿ ಅಪಹರಣಕ್ಕೊಳಗಾಗಿದ್ದಳು. ಅಂದು ಉದ್ಯೋಗದಲ್ಲಿದ್ದ ಆಕೆಯ ತಾಯಿ ಅಲ್ಟಾ ಅಪಾಂಟೆನ್ಕೊ, ತನ್ನ ಮಗು ನೋಡಿಕೊಳ್ಳಲು ಜನ ಬೇಕೆಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದರು. ಹೀಗೆ ಭೇಟಿಯಾದ ಮಹಿಳೆಯೊಬ್ಬಳನ್ನು ಪೂರ್ವಾಪರ ವಿಚಾರಿಸದೆ ಮೆಲಿಸ್ದಾಳನ್ನು ಅವಳ ಸುಪರ್ದಿಗೆ ನೀಡಿದ್ದರು. ಅದೊಂದು ದಿನ ಅಲ್ಟಾ ಕೆಲಸಕ್ಕೆ ತೆರಳಿದ್ದ ವೇಳೆ ಕೆಲಸದಾಕೆ ಮಗುವನ್ನು ಅಪಹರಿಸಿ ನಾಪತ್ತೆಯಾಗಿದ್ದಳು. ಅದಾಗಿ ಎಲ್ಲೆಡೆ ಹುಡುಕಾಡಿದರೂ ಮೆಲಿಸ್ಸಾ ಪತ್ತೆಯಾಗಿರಲಿಲ್ಲ. ಕೆಲ ದಿನಗಳ ಹಿಂದೆ ಫೋರ್ಟ್‌ವರ್ತ್‌ನಿಂದ 1,100 ಕಿ.ಮೀ. ದೂರದಲ್ಲಿರುವ ಚಾರ್ಲ್ಸ್‌ಟನ್ ಬಳಿ ಮೆಲಿಸ್ಸಾ ಇರುವುದಾಗಿ ಮಾಹಿತಿ ಸಿಕ್ಕಿದ್ದು, ಅದರಂತೆ ಆಕೆಯನ್ನು ಪತ್ತೆಹಚ್ಚಿ ಡಿಎನ್‌ಎ ಪರೀಕ್ಷೆ ನಡೆಸಲಾಯಿತು. ಪರೀಕ್ಷೆಯ ಫಲಿತಾಂಶ, ಆಕೆಯ ದೇಹದ ಮೇಲಿದ್ದ ಮಚ್ಚೆ, ಜನ್ಮ ದಿನದ ಸಹಕಾರದಿಂದ ಆಕೆಯನ್ನು ತಮ್ಮ ಮಗಳೆಂದು ಕುಟುಂಬ ಸಾಬೀತುಪಡಿಸಿದ ಹಿನ್ನೆಲೆಯಲ್ಲಿ ಕುಟುಂಬಕ್ಕೆ ಆಕೆಯನ್ನು ಹಸ್ತಾಂತರಿಸಲಾಗಿದೆ.
ಇದೀಗ ಬರೋಬ್ಬರಿ 51 ವರ್ಷಗಳ ಬಳಿಕ ಮೆಲಿಸ್ಸಾ ತನ್ನ ಕುಟುಂಬ ಸದಸ್ಯರನ್ನು ಸೇರಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!