ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಎಂದ ಸಚಿವ ಜಮೀರ್‌: ಸರ್ಕಾರ ಹಣ ಖರ್ಚು ಮಾಡುವುದು ನಿಲ್ಲಿಸಲಿ ಎಂದ ಚೇತನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯಕ್ಕೆ ಸಚಿವ ಜಮೀರ್‌ ಅಹ್ಮದ್‌ ಸೂಚನೆ ನೀಡಿರುವ ವಿಚಾರವಾಗಿ, ನಟ ಚೇತನ್‌ ಅಹಿಂಸಾ ಪೋಸ್ಟ್‌ ಮಾಡಿದ್ದಾರೆ.

ಮದರಸಾಗಳಲ್ಲಿ ಕನ್ನಡ, ಇಂಗ್ಲೀಷ್‌, ವಿಜ್ಞಾನ ಮತ್ತು ಗಣಿತವನ್ನು ಕಡ್ಡಾಯಗೊಳಿಸಲು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಉದ್ದೇಶಿಸಿದ್ದಾರೆ. ಕಾಂಗ್ರೆಸ್‌ನ ಟಿಂಕರಿಂಗ್‌ಗೆ ಇದು ಮತ್ತೊಂದು ಉದಾಹರಣೆ ನಿಜವಾದ ಜಾತ್ಯಾತೀತತೆಗಾಗಿ, ಸರ್ಕಾರವು ಮದರಸಾಗಳಿಗೆ (ಮತ್ತು ಮಠಗಳಿಗೆ) ಹಣವನ್ನು ಖರ್ಚು ಮಾಡುವುದನ್ನು ನಿಲ್ಲಿಸಬೇಕು. ಮದರಸಾಗಳು ಮುಸ್ಲಿಂ ಯುವಕರ ಅಥವಾ ತರ್ಕಬದ್ಧ ಸಮಾಜದ ಹಿತದೃಷ್ಟಿಯಿಂದ ಕೂಡಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ.

ಸಚಿವ ಜಮೀರ್ ಅಹಮದ್ ಖಾನ್, ಮುಸಲ್ಮಾನರ ಕಲಿಕಾ ಕೇಂದ್ರಗಳು ಎನಿಸಿಕೊಂಡ ಮದರಸಾಗಳಲ್ಲಿ ವಿಜ್ಞಾನ, ಗಣಿತ, ಕನ್ನಡ ಮತ್ತು ಇಂಗ್ಲೀಷ್‌ ಸೇರಿದಂತೆ ಎಲ್ಲಾ ವಿಷಯಗಳನ್ನು ಬೋಧನೆ ಮಾಡಬೇಕು. ಅದಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದರು. ಅದರೊಂದಿಗೆ ರಾಜ್ಯದ ಪ್ರತಿಯೊಂದು ಮದರಸಾಗಳಲ್ಲೂ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು ಎಂದು ಸೂಚನೆ ನೀಡಿದ್ದರು.

ರಾಜ್ಯದ ವಕ್ಫ್‌ ಬೋರ್ಡ್‌ನಲ್ಲಿ ಇಲ್ಲಿಯವರೆಗೂ 1265 ಮದರಗಳಾಗಳು ನೋಂದಣಿಯಾಗಿದೆ. ಅಧಿಕಾರಿಗಳು ಕನಿಷ್ಠ 100 ಮದರಸಾಗಳಲ್ಲಿ 5 ಸಾವಿರ ಮಕ್ಕಳಿಗೆ ಪ್ರಾಯೋಗಿಕವಾಗಿ ಕನ್ನಡವನ್ನು ಬೋಧನೆ ಮಾಡಬೇಕು ಮುಂದಿನ ವರ್ಷದಿಂದ ರಾಜ್ಯದ ಎಲ್ಲಾ ಮದರಸಾಗಳು ಕನ್ನಡ ಬೋಧನೆಯನ್ನು ಪ್ರಾರಂಭ ಮಾಡಬೇಕು. ಈ ಕುರಿತಾಗಿ ಅಧಿಕಾರಿಗಳು ವಿವರವಾದ ಪ್ರಸ್ತಾವನೆಯನ್ನು ಸಿದ್ಧ ಮಾಡಬೇಕು ಎಂದಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!