ರಕ್ಷಾ ಬಂಧನ: ಹೇಗಿತ್ತು ಪ್ರಧಾನಿ ನರೇಂದ್ರ ಮೋದಿಯ ಸಂಭ್ರಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು ದೇಶದಲ್ಲಿ ರಕ್ಷಾ ಬಂಧನ ಸಂಭ್ರಮ. ಸಹೋದರಿ ಮತ್ತು ಸಹೋದರರು, ಪರಸ್ಪರ ರಾಖಿ ಕಟ್ಟುವ ಮೂಲಕ ಹಬ್ಬಕ್ಕೆ ಶುಭಕೋರಿದ್ದಾರೆ. ಈ ನಡುವೆ ದೆಹಲಿ ಶಾಲೆಗೆ ಭೇಟಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿದ್ಯಾರ್ಥಿನಿಯರು ರಾಖಿ ಕಟ್ಟಿ, ರಕ್ಷಾ ಬಂಧನ ಆಚರಿಸಿದ್ದಾರೆ.

ಬಂದಿದ್ದ ಪುಟ್ಟ ಮಕ್ಕಳೊಂದಿಗೆ ಆಪ್ತವಾಗಿ ಸಂವಾದ ಮಾಡುತ್ತಾ ಮೋದಿ ತಮ್ಮ ಕೈ ರಕ್ಷೆಯನ್ನು ಕಟ್ಟಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ದೇಶದ ಜನತೆಗೆ ರಕ್ಷಾ ಬಂಧನದ ಶುಭಾಶಯ ಕೋರಿದ ಪ್ರಧಾನಿ, ಅಕ್ಕ-ತಂಗಿಯರ ನಡುವಿನ ಅವಿನಾಭಾವ ವಿಶ್ವಾಸ ಮತ್ತು ಅಪಾರ ಪ್ರೀತಿಗೆ ಸಮರ್ಪಿತವಾಗಿರುವ ಈ ಪವಿತ್ರ ಹಬ್ಬವು ನಮ್ಮ ಸಂಸ್ಕೃತಿಯ ಪವಿತ್ರ ಪ್ರತಿಬಿಂಬವಾಗಿದೆ ಎಂದು ಟ್ವೀಟ್​ ಮಾಡಿ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!